ಮನವು ಜಾರಿದಾಗ
ಮನವು ಜಾರಿದಾಗ
ತನು ಮನದ ಭಾವಮದ್ಯದಿ
ಬೆಂದು ಜರ್ಜರಿತವಾಗಿದೆ
ಅದಕು ಇದಕೊ ಎದಕೊ
ಮರ್ಕಟ ಮನ ಜಾರಿ ಹೊಗಿದೆ
ನಾನಾ ಕಲ್ಪನೆಯ ಕುಹಕಿನಲಿ
ಅಂತರಾಳ ನಲುಗಿ ನಿವುಚಿದೆ
ಕಡಲಾಚೆಗೂ ಕಣ್ಣಂಚಿನಲಿ
ದೂರದೂರಿನ ಕನಸು ಎದ್ದು ಕುಣಿದಿದೆ
ಹೇಗೊ ಎನೊ ಎತ್ತೆತ್ತಲೋ ತಿರುಗಿ ಹೊದೆ
ಜಾರಿ ನಿಂತಿತು ಮಸಣದುದರಕೆ ಮನವು
ಏನು ಹೊಗಳಿ ತೆಗಳಿ ಹೇಳಲಿ ಇದರ ಮರ್ಮವ
ಮನವ ಅರಿವಿನಂಗಳಕೆ ಕರೆದು ನಿಲ್ಲಿಸಿ
ತಿಳಿದವನೋ ಮಹಾ ತತ್ವಜ್ಞಾನಿ ಎಂದು ಕರೆಯಲೇ ಅನೀಕೇತನ ಪ್ರೀಯ
***
ಪ್ರಹ್ಲಾದ್ .ವಾ. ಪತ್ತಾರ
ಕಾಮೆಂಟ್‌ಗಳು