ಕನ್ಯಾಕುಮಾರಿ

ಕನ್ಯಾಕುಮಾರಿ
ಭರತಮಾತೆ ಪಾದತಟವೆ
ಸಿಡಿಲಸನ್ಯಾಸಿ ತಪೋಭೂಮಿಯೆ
ನೀ ಧನ್ಯ ಧನ್ಯ ಓ ಯನ್ನ ತನುವೆ

ಅಬ್ದಿ ಅಲೆಗೆ ಎದೆಗೊಟ್ಟು ನಿಂತ
ಭಾಸ್ಕರನ ತಪೋ ಕಾಂತಿ ಕಿರಣವೆ
ಭಾರತಾಂಬೆ ಹೆಮ್ಮೆ ಪುತ್ರರತ್ನ 
ಪುತ್ಥಳಿ, ನೀಲಗಗನದಾಚೆ ಬಿಂಬವೆ
ಓ ತಾಯಿ ಜಲನಿಧಿ ವಾತ್ಸಲ್ಯ ಮೂರ್ತಿಯೆ

ಹೆಬ್ಬಂಡೆ ಸುತ್ತ ದೈತ್ಯದಲೆಗಳಬ್ಬರವೆ
ಭೋರ್ಗರೆವ ಕಡಲನಿಜಿನಿಂತ ಸಿಂಹವೆ
ನಿನ್ನ ಆ ಧ್ಯಾನತಟದಿ ದಿವ್ಯಶಾಂತಿ ಸುಧೆ
ತಾಯಿಪಾದ ಚರಣಕಮಲದಡಿ ಕುಳಿತೆ
ನೀ ದನ್ಯ ಓ ಎನ್ನ ಮನವೆ

ಧ್ಯಾನಸಮಾಧಿಯಲಿ ಲೀನನಾಗಿ
ಸನಾತನಸಂಸ್ಕೃತಿ ವಿಶ್ವದೆತ್ತರಕೆ ಸಾರಿ
ಮತ್ತೆ ತಾಯಿ ಕಿರುತಿ ವಿಶ್ವರೂಪದಿ ಪ್ರಜ್ವಲಿಸಲು
ಅಂಬೆ ಕೀರ್ತಿ ಪತಾಕೆ ಶಿಖರ ಹೊತ್ತುನಿಂತ
ಓ ಎನ್ನ ಮನದ ಸಿರಿಯೆ
ನಾ ಧನ್ಯೊಸ್ಮಿ ಓ ಅನಿಕೇತನ ಪ್ರಿಯನೆ
****
ಪ್ರಹ್ಲಾದ್ .ವಾ. ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ