ಪ್ರೀತಿ ಮುದುಡಿ ಕುಳಿತಿತ್ತು
ಪ್ರೀತಿ ಮುದುಡಿ ಕುಳಿತಿತ್ತು
ಬಿಡಿಸಲಾಗದ ಬಂಧನಗಳು
ಇವು ಬಾಳಿನ ಒಗಟುಗಳು
ಹುಟ್ಟಿನೊಡಗೂಡಿ ಬಂದವು
ಒಂದರೊಳಗೊಂದು ಬೆಸುಗೆಯಲಿ
ದೇಹಕೆ ಯವ್ವನ ಅಂಕುರಿಸಿ ಸೇರಲು
ಕಾಯ , ಕಾಮದ ಹಸಿವು ಹಂಬಲಿಸಿತು
ಇದಕೆ ,ಮಡದಿ ಮೋಹದ ಕೊಂಡಿಸೇರಿತು
ಅದಕೆ , ಕಾಂಚಾಣದ ಮೋಹ ಪುಟಿಯಿತು
ಮನವು, ಸಕಲೈಶ್ವರ್ಯದ ಪ್ರಳಯ ನರ್ತನಗೈಯಿತು
ಇದು ,ಮಡದಿ ಮಕ್ಕಳ ಮೋಹದ ಪಾಶಕೆ ದೂಡಿತು
ಇದುವೆ ವಿಭಕ್ತಕುಟುಂಬಗಳ ಸೃಷ್ಟಿಗೆ ನಾಂದಿ
ಭಗಿನಿ ಭಾತೃ ತಾಯಿ ಮಮತೆ ಸಡಿಲಿಸಿ
ಬೆಳೆಯುತ್ತ ಬೆಳೆಯುತ್ತ ದಾಯಾದಿಗಳು
ಮನ ಮಿಡಿದು ಮೌನ ರೂಪ ತಾಳಿತು
ಈ ಚೌಕಟ್ಟಿನಲ್ಲಿ ಪ್ರೀತಿ ಮುದುಡಿ ಕುಳಿತಿತ್ತು
*****
ಪ್ರಹ್ಲಾದ್ . ವಾ . ಪತ್ತಾರ
ಕಾಮೆಂಟ್‌ಗಳು