ಅವ(ಳು) ನಾ ನಾದೆ

ಅವ ( ಳು) ನಾನಾದೆ

ಬಾಲ್ಯದಲ್ಲಿ ಲಿಂಗದ ಪರಿವಿಲ್ಲದ  ಅಂಗ
ಲಿಂಗದ ಪರಿ  ಅರಿವಾಗುವ ಮುನ್ನವೇ ಭಿನ್ನಬಾವ
ಹೀಗಾಗಿ ಹಿಡಿದು ಜಡಿದು ದುಕಿದರು  ಹೆತ್ತವರು ಹೊರಗೆ
ಅನಾಥಳಾ(ನಾ)ಗಿ  ದಿಕ್ಕು ಕಾಣದೇ ಕಂಗಾಲಾಗಿ ಓಡಿದೆ
ಸುಡುವ ಬದುಕು ಕಂಗಾಲಾದ ಕಣ್ಣುಗಳು  ಎದೆಯಲ್ಲಿ ಹತಾಶೆ
ಬೇವಾಯಿತು‌ ಬಾಳು  ಉಸಿರೊಳಗೆ ಬೆರೆತು ಹೋಯಿತು ಗೋಳು
ಜನರ ನೋಟ ಮಾತು  ಕೇಳಿ ತಳಮಳ ತಬ್ಬಿಬ್ಬಾದ ಗಳಿಗೆಗಳು
ರೂಪಾಂತರವೋ ಲಿಂಗಾಂತರವೋ ಹೆಣ್ಣು ಗಂಡಲ್ಲದ ವಿರುಪ
ದೇಹದಾಂತರ್ಯದಲಿ ಯಡಬಿಡಮಗಿ ವೇದನೆ  ರೋದನ
ಯಾರೂ ಕೇಳುವರು ನನ್ನ ನೀವೆದನೆ  ಮನುಷ್ಯರಿರುವರೆ ಜಗದೊಳು

ನಾ ನಾನಾಕಡೆ ಅಲಿಯುವದು ಕಂಡು  ಕೂಗಿ ಕರೆದರು
ಬಂಡ ಪುಂಡ ಹಾದಿ ಬೀದಿಯ ಹೈಕ್ಲುಗಳು ಮಜಾ ನೋಡಲೆಂದು
ಕೊಜಾ , ಹಿಜಡಾ, ಏ ಸಿಕಂಡಿ ಬಾ ಎಂದು
ಇದರಲ್ಲೂ  ಕೆಲವು ಸಭ್ಯರೂ ಮಂಗಳಮುಖಿ ಎಂದು‌

ಗಂಡು ಹೆಣ್ಣಿನ ದರ್ಪ ದೌರ್ಜನ್ಯದ ಪ್ರತಿರೂಪ ವಿರೂಪ
ಹುಟ್ಟಿಸಿದ ದೈವಕ್ಕೆ ದಿಕ್ಕಾರವಿಕ್ಕಿ ಲಿಂಗಾಂತರದ ಕುರೂಪ
ಸೂಳೆಗಾರಿಕೆಯ ಅಡ್ಡಕಸುಬೆ  ಜೀವನಾಧಾರದ ಕೂಪ
ಈ ಅಸಾಯಕ ಬದುಕೆ ಒಂದು ರಾಕ್ಷಸ ಸ್ವರೂಪ.
ಬಾಳಿ ಬದುಕಲು ನೂರು ಊರು ಹುಡುಕಿ ಹೊರಟರೆ
ಹತ್ತಾರು ಬಾಳ ಹಾದಿಗಳು ಆದರೇನು ಫಲ ?
ಗಟ್ಟಿಯಾಗಿ ಅಛಲವಾಗಿ ನಿಲ್ಲಲು ಬಾರದ ದಿಟವಲ್ಲದ ಬಾಳು
ಮಾನವಿಯತೆ ಸಾರಿ ಹೇಳುವ ಧರ್ಮ ದೇವತೆಗಳೇ
ಈ ಬಡಪಾಯಿ ಬದುಕು ಕಿಂಚಿತ್ತು ಹಸನುಗೊಳಿಸುವಷ್ಟು
ಶಕ್ತಿ ಯುಕ್ತಿ ಮುಕ್ತಿ ನಿಮ್ಮಲ್ಲಿಲ್ಲವೆ ಒಂದಿಷ್ಟು ?
*****
ಅನೀಕೇತನ ಪ್ರಿಯ
15/6/16 ರಂದು  ರೈಲಿನಲ್ಲಿ ಪ್ರಯಾಣಿಸುವಾಗ ಮಂಗಳಮುಖಿ ಕಂಡು ಗಿಚಿದ್ದು .

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ನಿಮಗೆಲ್ಲ ನೆನಪಿದೆ ತಾನೆ