ಪಠ್ಯಪುಸ್ತಕದ ಗೊಂದಲ ಬೇಗ ಪರಿಹರಿಸಿ

ಪಠ್ಯಪುಸ್ತಕದ ಗೊಂದಲ ಬೇಗ ಪರಿಹರಿಸಿ
ಒಂದನೇ ತರಗತಿ‌‌ ಇಂದ ಹತ್ತನೇ ತರಗತಿವರೆಗೂ ಪಠ್ಯಪುಸ್ತಕ ಪರಿಷ್ಕರಣೆ ಅಥವಾ ಬದಲಾವಣೆ ಮಾಡಲು ಸರ್ಕಾರ ದಿನಕ್ಕೊಂದು ಮಾದ್ಯಮ‌ ಹೇಳಿಕೆ ಬಿಡುಗಡೆ ಮಾಡುತ್ತಿದೆ . ಈ ಕುರಿತು ಸಾರ್ವಜನಿಕರಿಗೆ ಸ್ಪಷ್ಟ ನಿಖರ ಮಾಹಿತಿ ನೀಡದೆ ಗೊಂದಲ ಮೂಡಿಸಿ, ಮಕ್ಕಳ ಶೈಕ್ಷಣಿಕ ಭವಿಷ್ಯದ ಜೊತೆ ಚಲ್ಲಾಟ ಆಡಲಾಗುತ್ತಿದೆ. ಪಠ್ಯ ಪರಿಷ್ಕರಣ ಸಮಿತಿ,  ಡಿ.ಎಸ್.ಆರ್,ಟಿ. ಸಿ ಮತ್ತು ಸಾರ್ವಜನಿಕ ಶಿಕ್ಷಣ ಇಲಾಖೆ ನಡುವೆ ಹೊಂದಣಿಕೆ ಕೊರತೆ  ಮೆಲ್ನೋಟಕ್ಕೆ  ಎದ್ದು ಕಾಣುತ್ತಿದೆ. 
ಇನ್ನೂ ಕೇವಲ ಎರಡು ತಿಂಗಳಲ್ಲಿ ಪಠ್ಯಪುಸ್ತಕ ರಾಜ್ಯದ ಪ್ರತಿ ಶಾಲೆಗೂ ಸೇರಬೇಕು .ಪಠ್ಯಪರಿಷ್ಕರಣೆಯ ಬಗ್ಗೆ   ಹಠಸಾಧನೆ ಮಾಡುವದರಿಂದ ಮಕ್ಕಳಿಗೆ ಪುಸ್ತಕ ನಿಗದಿತ ಸಮಯಕ್ಕೆ  ದೊರೆಯದೇ  ಕಲಿಕೆಗೆ ತೊಂದರೆಯಾಗಬಹುದು.  ಈ ಹಗ್ಗ ಜಗ್ಗಾಟದ ಜಟಾಪಟಿ ಬಿಟ್ಟು ಒಂದು ಸೂಕ್ತ ನಿರ್ಣಯ ಕೈಗೊಂಡು ಮಕ್ಕಳ ಹಿತ ಎಲ್ಲರೂ  ಕಾಯಬೇಕಿದೆ .  ಸೂಕ್ತ ಸಮಯದಲ್ಲಿ ನಿರ್ಣಯ ತಗೆದುಕೊಳ್ಳದೇ ಹೊದಲ್ಲಿ ಮುಂದೆ ಅಗಬಹುದಾದ ಸಮಸ್ಯೆಗಳಿಗೆ ಯಾರು ಹೊಣೆ ಹೊರುತ್ತಾರೆ ?  ಆದಷ್ಟು  ರಜೆಯಲ್ಲಿಯೆ ಹತ್ತನೆ ತರಗತಿ ಪಠ್ಯಪುಸ್ತಕ  ಶಾಲೆಗೆ ದೊರೆತರೆ , ಮುಂದಿನ ಶೈಕ್ಷಣಿಕ ವರ್ಷದಲ್ಲಿ ಮಕ್ಕಳಿಗೆ  ಮತ್ತು ಶಿಕ್ಷಕರಿಗೆ  ಅವಲೋಕನ ಮಾಡಿ  ಪೂರ್ವಸಿದ್ದತೆ ಮಾಡಿಕೊಳ್ಳಲು ಸಹಕಾರಿಯಾಗುವದು. ಸಂಬಂದಪಟ್ಟವರು   ಇದರತ್ತ ಗಮನ ಹರಿಸುವರೆ ?
***
ಇಂದ
ಪ್ರಹ್ಲಾದ್ . ವಾ. ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ