ನನ್ನ ತಿಥಿ ಊಟ ಬಡಿಸಿ ಸಂತೃಪ್ತರಾಗಿ
ನನ್ನ ತಿಥಿ ಊಟ ಬಡಿಸಿ ಸಂತೃಪ್ತರಾಗಿ
ನಾನು ಕಳೆದ ಬಾಲ್ಯ ಯವ್ವನದ ಆ ,ದಿನಗಳಲ್ಲಿ
ಹೀಗೊಂದು ಕಾಲವಿತ್ತು ...
ಕನ್ನಡ,ಕನ್ನಡ,ಎಲ್ಲೆಡೆಯೂ ,ನುಡಿಗನ್ನಡ
ನನ್ನ ಮುದ್ದಿಸಿ ಆಡಿಸಿ ಆನಂದಪ್ಟವರೆಷ್ಟೋ ಜನರು
ರಾಜವೈಭವದಿಂದ ರಾಜರ ಆಶ್ರಯಪಡೆದಿದ್ದೆ
ಧಿಮಂತರ ಉಡಿ ಉಸಿರಲ್ಲಿ ಸದಾ ಉಲಿದು ಉಳಿದು
ಪ್ರೋತ್ಸಾಹ , ಪ್ರೇರಣೆ, ಆದಿಕವಿಗಳ ಪೊಷಣೆಪಡೆದು
ಎಲ್ಲರ ಹೃದಯಂಗಳದಿ ವಿರಾಜಮಾನವಾಗಿ ರಾರಾಜಿಸುತಿದ್ದೆ .
***
ನಡುವಯಸ್ಸಿನ ಭೊರ್ಗರೆವ ಜೀವನವದು
ಬೆಳೆದು ಬಾಳಿ ಬದುಕಬೇಕಾದ ಕಾಲವದು
ನನ್ನ ಸಹಪಾಟಿ ಹಿತೈಸಿಗಳೊಡನೆ
ಸ್ಪರ್ಧಿಸಿ,ಸೆಣಸಾಡಿ, ಅಸ್ತಿತ್ವಕ್ಕಾಗಿ ಹೋರಾಡಿ
ಉಜ್ವಲ ಬದುಕು ಕಟ್ಟಿಕೊಳ್ಳುವ ಆ ದಿನಗಳು
ಹುಲುಸಾಗಿ ಬೆಳೆಯಲು ಕವಿಗಳ ಕೈಗಳು
ಸಾವಿರಾರು ಜನರು ಕಾವ್ಯಸುಧೆಯ ಮಳೆಗೈದರು
ಹುಲುಸಾಗಿ ಬೆಳೆಯಲು ಸಾವಿರಾರು ಕೈಗಳು
ವಿಶ್ವದೆತ್ತರಕೆ ನನ್ನ ಬೆಳೆಸಲು
ಹಗಲಿರುಳು ಬೆವರು ಸುರಿಸಿ ಕೈ ಜೊಡಿಸಿ ದುಡಿದರು
ಪಶ್ಚಿಮದ ಅಬ್ಬರದ ಬಿರುಗಾಳಿ ಬೀಸಿದಾಗ
ತರಗೆಲೆಯಂತೆ ನಾ ತತ್ತರಿಸಿ ನಡಿಗಿದೆ .
ಆದರೂ ನಡು ಬಗ್ಗಿಸದೇ ,
ಆಡುಮಾತಾಗಿ ನೆಲದ ನಾಲಿಗೆಯ ಮೇಲೆ ಕುಣಿಕುಣಿದಾಡಿದೆ .
ದಿನಗಳುರುಳಿದವು ...ಆಂಗ್ಲ ಆದೀನ ಸಾಮಂತಳಾದೆ .
ಅದಾಗಲೇ ರಾಜಪೋಷಾಕು ಕಳಚಿ ಕಣ್ಮರೆಯಾಗಿ ಹೋಗಿತ್ತು .
****
ಕಾಲ ಉರುಳಿ ಪಶ್ಚಿಮದ ಅಬ್ಬರದ ಗಾಳಿ ಮಾಯವಾಯಿತು
ಸರಿಪಡಿಸಲಾರದಷ್ಟು ಜರ್ಜರವಾದ ದುಗುಡದ ಬದುಕು ನನ್ನದಾಯಿತು
ನಾ ,ಭಾರತಾಮಬೆಯ ತನುಜಳಾಗಿ ಜನ್ಮತಾಳಯಲು
ನನ್ನ ಸಿರಿವಂತಿಕೆಯ ನೆರಳನರಸಿ ಬಹುಮಂದಿ
ಊರು ಕೇರಿ ಬಿದಿಗಳಲ್ಲಿ ಹೆಗಲುಕೊಟ್ಟು ಹೋರಾಡಿದರು
ಮತ್ತೆ ಸ್ವಾವಲಂಭಿ ಸ್ವತಂತ್ರಳಾಗಿ ಕನ್ನಡಿಗರ ಮಾತೆಯಾಗಿ
ಕನ್ನಡಿಗರ ಹೃನ್ಮಂದಿರದಲ್ಲಿ ವೀರ ವಿರಾಜಮಾನಳಾದೆನು
***
ಛೇ ...
ನನಗಿಷ್ಟು ಬೇಗ ವೃದ್ದಾಪ್ಯದ ಕರಿಛಾಯೆಯೆ ?
ಖಂಡಿತ ನಾ, ಕನಸಲ್ಲೂ ಕಂಡಿರಲಿಲ್ಲ
ನನ್ನ ನೆಚ್ಚಿಕೊಂಡು ಬಾಳಿ ಬೆಳದ ಮಕ್ಕಳು
ಇವರ ಮೊಮ್ಮಕ್ಕಳಿಗೆ ನಾ ಬೇಡವಾದೆನೆ
ತಿರಸ್ಕೃತಳಾಗಿ ಮೆಯಲ್ಲಿ ಗುರುತ್ತ ಕುಳಿತ ಅಜ್ಜಿತಾದೆನೆ
ಸಮಾಜ ಬಾಹಿರಳಾಗಿ ನಾಲ್ಕನೇ ತಲೆಮಾರಿಗೆ ಬಹಿಷ್ಕೃತಳಂತಾದೆನೆ
ಖಂಡಿತ ನನ್ನ ಎದೆ ನಡುಗಿ ನೀರಾಗುತ್ತಿದೆ
ನನ್ನ ಸಾವು ಹತ್ತಿರ ಬರುತ್ತಿದೆ ಎಂದು ಭ್ರಮೆ ಮೂಡುತ್ತಿದೆ
ಈ ಅಭಿಮಾನ ಶೂನ್ಯರಾದ ಮೊಮ್ಮೊಕ್ಕಳಿಂದ
ನಾನೆನು ನೀರಿಕ್ಷಿಸಲಿ ... ಏನು ತಿದ್ದಿ ಬುದ್ದಿ ಹೇಳಲಿ ?
****
ವೃದ್ದೆಯ ಅನುಭವಾಮೃತವ ಅಗತ್ಯ ಅವರಿಗಿಲ್ಲ
ಬದುಕು ಕಟ್ಟಿಕೊಳ್ಳಲು ನನ್ನ ಜ್ಞಾನ ,ಅನುಭವ ಆಧಾರಗಳ ಅಗತ್ಯವಿಲ್ಲ
ನಿ ಗೊಡ್ಡು ನಿಸ್ಪ್ರಯೋಜಕಳು ಎಂದು ಜರಿದು ಹಂಗಿಸಿ ಜಡಿವರು
ಅಯೋ ..
ನನ್ನಿನ್ನ ರಕ್ಷಿಸುವೆವು ನಾವು ಕಾವಲು ಪಡೆ ಕಟ್ಡುವೆವು ನಿನ್ನ
ಸೇವೆಗೆ ನಾವು ಸದಾ ಸಿದ್ದರೆಮದು
ಬೆಂಗಳೂರು ಆದಿತಾಗಿ ಅಲ್ಲಲ್ಲಿ ಕೆಲವು ಕೈಗಳು ಕಂಡರೂ
ಇವರ ಹಿಂದಿನ ಮರ್ಮ ನನಗರಿವಾಗದೇ
ಕಣ್ಣು ಮಂಜಾಗಿ, ಕಿವಿ ಕಾಣದೇ, ಬುದ್ದಿ ಅರಳುಮರುಳು
***
ಆಡಳಿತಯಂತ್ರ ತುಕ್ಕುಹಿಡಿದು ಕೆಟ್ಟುನಿಂತಿದೆ
ಬರಿ ಕರುಣೆ ಸಾಂತ್ವಾನ ಸಮಾಧಾನ ಆಗಾಗ
ನನ್ನ ಮೈ ಸವರಿ ಕೈ ತೊಳದುಕೊಳ್ಳುತಿದೆ
ಧೀರ, ದಿಟ್ಟ, ಅಛಲ ನಿರ್ಧಾರ ನೀತಿಯಿಲ್ಲದ ಆಡಳಿತವಿದು
ಅಗತ್ಯವಿದ್ದಡೆ ಕಣ್ಣು, ಮೂಗು ,ಬಾಯಿ, ಕಿವಿ ಮುಚ್ಚಿ ಕುಳಿತಿದೆ
ಭಹುಷ್ಯ ನಾ ಸತ್ತಾಗ ನಾಲ್ಕು ಕಣ್ಣಿರು ಹಾಕಲು
ಪುಷ್ಪಗುಚ್ಚ ಕೈ ಯಲ್ಲಿ ಹಿಡಿದು ಕಾತುರದಿ ಕಾಯುತಿದೆಯೆನೋ
ಶ್ರಾದ್ಧಮಾಡಲು ಟೆಂಡರು ಕರೆಯಲು ಪಕ್ಕದವರಿಗೆ ಹೇಳಿದ್ದಾರೋ ಏನೋ
****
ನಾ ,ಯಾರಿಗೂ ಬೇಡವಾದೆನೆ ?
ಕೌತುಕದಿಂದ ಕಾಲ ಕ್ಷಣ ತಳ್ಳಿ ಕಾಯಿರಿ
ನಾ ಖಂಡಿತ ಬಹಳದಿನ ಬದುಕಲಾರೆನು
ನನ್ನ ಸಾವು ನಿಮಗೆಲ್ಲ ಸಂತಸ ತರುವದೆನೋ
ನಿಮೆಲ್ಲ ಬಯಸುವದು ಅದೇ ತಾನೆ ?
ಹಾಗಾದರೆ ... ನಿರಿಕ್ಷಿಸಿ ,ಆಸಿಸಿ ...
ನನ್ನ ಗೋರಿಯ ಮೇಲೆ ಮಹಾಮಂಟಪ ಕಟ್ಟಿ
ಮಾತೃಪಕ್ಷ ಆಚರಿದುತ್ತಾ ,ಸಮಾರಾಧನೆ ಮಾಡುತ್ತಾ
ನನ್ನ ಬದುಕಿನ ಇತಿಹಾಸದ ದಿನಗಳ ಹಾಡಿ ಹೊಗಳಿ
ವೆದಿಕೆ ನಿರ್ಮಿಸಿ ಸಡಗರದಿ ಸಂಭ್ರಮಿಸುತ್ತಾ , ಸಂತೋಷದಿ
ನಾಲ್ಕಾರು ಜನರಿಗೆ ನನ್ನ ತಿಥಿ ಊಟ ಬಡಿಸುತ್ತಾ ಸಂತೃಪ್ತರಾಗಿ ಬಾಳಿ
@##@##@
ಅನಿಕೇತನ ಪ್ರೀಯ
(31-10-2013 7:30 ರಾತ್ರಿ ಬೆಂಗಳೂರಿನಲ್ಲಿ ಇರುವ ಕನ್ನಡದ ದುಸ್ಥಿತಿ ನೆನೆದು ಬರೆದದ್ದು
ಕಾಮೆಂಟ್‌ಗಳು