ಪುನರುದ್ಭವಿಸಿ ಭಾ ತಾಯೆ
ಪುನರುದ್ಭವಿಸಿ ಭಾ ತಾಯೆ
ಓ ಸ್ವತಂತ್ರ ಸಮರದೇವಿಯೇ
ಎಲ್ಲಿ ಅಡಗಿ ಲೀನವಾದೇ ತಾಯೇ ?
ಮೂಲ ಬಂಗಾಳಪ್ರಾಂತದೊಳು ಜನಸಿದೆಯಲ್ಲವೆ
ಎಕೆ ಮೌನವಾಗಿ ಕುಳಿತೆಯಿಂದು ತಾಯೆ ?
ನಿನ್ನ ಬಂಧನವ ಕಳಚಲೆಂದು ದಿಟ್ಟ ಹೆಜ್ಜೆ ಇಟ್ಟರಂದು
ರಾಜಾರಾಂ, ಭಗತ್ ಸುಭಾಸ್ ಹುಟ್ಡಿಬಂದರಲ್ಲವೆ ?
ತನುವಿನ ಹನಿರಕುತ ಸಮರಯಜ್ಞಕೆ ಆಹುತಿ ನೀಡಿ
ನವೋದಯದ ನೇತಾರರಾದರಲ್ಲವೆ ?
ಎಕೆ ಮೂಕಳಗಿ ಮಲಗಿದೆ ತಾಯೇ
ಓ ಸ್ವತಂತ್ರ ಸಮರದೇವಿಯೆ ?
ಬಂಡವಾಳಶಾಹಿ ಅನುವಂಶಿಯ ಆಡಳಿತ ನೋಡು ತಾಯೆ
ಭ್ರಸ್ಟಾಚಾರ ಹಣದ ದಾಹದ ಕುತಂತ್ರ ಕಾಣದೆ ತಾಯೆ
ಪ್ರಜಾಪ್ರಬುತ್ವದ ಮುಖವಾಡದ ಆಡಳಿತ ಕಾದೆ ತಾಯೆ
ಅಧಿಕಾರಶಾಹಿವ್ಯವಸ್ಥೆ ಧರ್ಪ ದುಷ್ಟತನ ನೋಡು ತಾಯೆ
ಓಟ್ ಬ್ಯಾಂಕ್ ನ ಮತಾಂದ ನಯವಂಚನೆ ಕಾಣು ತಾಯೆ
ವ್ಯವಸ್ಥಿತ ಅನಮಾನತೆ ಸ್ಥರಗಳ ನೋಡು ಬಾ ತಾಯೆ
ಹೊಲಸು ವ್ಯಶ್ಯೆ ಅಟ್ಟಹಾಸದ ದುಷ್ಟತನ ಕಾಣದೆ ತಾಯೆ
ಏಕೆ ಮೂಕಳಾಗಿ ಕುಳಿತೆ ತಾಯೆ
ಓ ಸ್ವತಂತ್ರ ಸಮರ ದೇವಿಯೆ ?
ಪುನರ್ಜನ್ಮ ಪಡೆಯಲು ಮೂಲ ಬಂಗಾಳ ನಿನ್ನಲ್ಲಿಲ್ಲವೆ ?
ರಕ್ತ ಮಾಂಸ ಮೂಳೆ ನಯವಂಚನೆಯಲಿ ಸುಲಿಯುವದು ನೋಡು ತಾಯೆ
ನೀ ಏಕೆ ಮಲಗಿರುವೆ ತಾಯೆ
ದೇಶದ ಯಾವ ಮೂಲೆಯಲ್ಲಾದರೂ ಯಾವ ರೂಪದಲ್ಲಾದರೂ ಮತ್ತೊಮ್ಮೆ ಪುನಃರುದ್ಬವಿಸಿ ಬಾ ತಾಯೇ
ಓ ಸ್ವತಂತ್ರ ಸಮರ ದೇವಿಯೆ
ಅನಿಕೇತನ ಪ್ರಿಯ ಸುತನ ಕಾಯೆ ತಾಯೆ
****
ಪ್ರಹ್ಲಾದ್ . ವಾ. ಪತ್ತಾರ
ಕಾಮೆಂಟ್‌ಗಳು