ಅಸ್ತಿತ್ವ


ಅಸ್ತಿತ್ವ

ಹುಟ್ಟುತ್ತ ಬೆಳೆಯುತ್ತ ಸಾವಿರಾರೂ ದಿನಗಳು
ಉರುಳಿ ಉರಿದು ಬುದಿಯಾಗುವವು
ಕೊನೆಗೊಂದು ಗಳಿಗೆ ಅದು ಸಾವಿನ ಮನೆ ಸೇರುವಸಮಯ
ಇದರ ನಡುವೆ ಜೀವನದ ಉದ್ದಕ್ಕೂ ದೊಂಬರಾಟ, ಮೊಡಿಕಾರ
ಆಗಾಗ ನಡೆಯೋದು ಯಕ್ಷಗಾನ ,ದೊಡ್ಡಾಟ ,ನಾಟಕದಾಟ
ಅದುಮಿ ಮುದುಡಿ ಕುಳಿತ ಆಸೆ,ಬಯಕೆ, ಬೆಡಿಕೆ ಇಡೆರಿಕೆಗೆ
ಆಗಾಗ ಪುಟಿದು ಮೇಲೆ ತೇಲಿಬಂದು
ಇಡೆರದೆ ಮತ್ತೆ ಪಾತಾಳಕ್ಕೆ ಇಳಿದು
ಆದರೂ ಜಟ್ಟಿ ಜಗ್ಗದೇ ಕುಸ್ತಿ ಅಖಾಡದಲಿ ನೆಲಕಚ್ಚಿಲ್ಲ
ಮಖಾಡನೆ ಮಲಗಿ ಬೆನ್ನಿಗೆ ಮಣ್ಣು ಮೆತ್ತಿದರೂ.. .
ಮತ್ತೊಮ್ಮೆ ಚಾನ್ಸ್ ಇದೆ ಎಂದು ಭರವಸೆಯ
ಕಿರು  ಮುಗುಳು ನಗೆ ಮುಖದಲಿ
ಜಂಜಾಟ ಜಟಾಪಟಿ ಹೊಡೆದಾಟ ಹೋರಾಟ
ಬದುಕೆ ಒಂದು ವಿಸ್ಮಯ ವಿಚಿತ್ರ ಅನುಭವ
ಸಾದಾ ಅಸ್ತಿತ್ವಕ್ಕಾಗಿ ಒಂದಲ್ಲಾ ಒಂದು ಕಾದಾಟ ಹೋರಾಟ
ಅಸ್ತಿತ್ವದ ಅನಾವರಣದ ಆವರಣ ಆಗುವ ವೇಳೆಗೆ ಕಾಲ ದಾರಿಯು
ದೂರಸರಿದು ಅನಿಕೇತನ ಪ್ರೀಯನ ಜೊತೆ ಲಿನವಾಗಿಹೊಗುವೆ .
***
11-03-2017  ಬದಿಕಿನ ಜಟಾಪಟಿ ಜಂಜಾಟದ ಬಗ್ಗೆ ಚಿಂತಿಮಾಡುತ್ತಾ ಗಿಚಿದ್ದು
ಪ್ರಹ್ಲಾದ್ .ವಾ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ