ಯಾರ ಕೋಪ ತಾಪವು ‌ನಿನಗೆ

ಯಾರ ಕೋಪ ತಾಪವು ನಿನಗೆ

ನಿನ್ನ ಬದುಕಲಿ ಬೇವು ಸವಿಯುತಲಿ
ನೀ ಪರರಿಗೆ ಬೆಲ್ಲವ ನೀಡುತಲಿ
ಪ್ರತಿದಿನ ನೀ ಸಂತಸದಿಂದಿರಲು
ವಿಧಿ ಬಯಕೆ ಬೈಗುಡದಿರಲು
ಯಾರ ಕೋಪದ ತಾಪವು  ನಿನಗೆ

ಕತ್ತಲು ಕಳೆಯುತ ಬೆಳಕನುಹರಿಸುತ
ಎಲ್ಲರ ಬಾಳಿನ ಬುತ್ತಿಯ ಕಟ್ಟುತ
ಪರರಿಗೆ ನೀ ಸಂತಸ ನೀಡುತಿರಲು
ಕರುಣೆಯ ಕಡೆಗೊಲಾಗಿರಲು
ಯಾರ ಕೋಪದ ತಾಪವು ನಿನಗೆ

ನನ್ನ ಬಾಳಿಗೆ ದೀಪವ ಹಚ್ಚುತಿರಲು
ನಿನ್ನ ಕೆಳಗೆ ಕತ್ತಲು ಕವಿದಿರಲು
ಒಪ್ಪದು ಮನ ಸಂತಸದ ನಗೆ ಬೀರಲು
ಇದು ಎಲ್ಲರ  ಬಾಳಿನ ಲೀಲೆಯಾಗಿರಲು
ಯಾರ ಕೋಪ ತಾಪವು ನಿನಗೆ

ನೀ ನೋವು ನುಂಗುತಿರಲು
ವದನದಿ ನಲಿವನು‌  ಬಿರುತಿರಲು
ನಿನ್ನ ಸುತ್ತಲು ಸುಮಧುರ ಸುಸೂತಿರಲು
ಸರ್ವರಿಗೆ ಸಂತಸ ಸುಧೆ ನೀಡುತಿರಲು
ಯಾರ ಕೋಪತಾಪವು ನಿನಗೆ

ನೀ ಜಗದ ಚೈತನ್ಯದಾಯಿ ಯಾಗಿರಲು
ಈ ತನುವಿನ ತಮವ ಕಳೆಯಲು
ಹೊಸರೂಪದಲಿ ಹೊಸಹೊಳಲಿನಲಿ
ಹೊಸತನದಲಿ‌  ಹೊಂಗಿರಣದಲಿ
ನೀ ಹೊರಹುಮ್ಮಿ ಬರುವೆ ಏನಿತು

ನೀ ಘರ್ಜಿಸಿ ಚೈತನ್ಯ ಹೊಡೆದೆಬ್ಬಿಸಿ
ಮೈ ಕೊಡವಿ ಮೇಲೆಳಲು
ಈ ತೆಜೊಮಯ ದಿವ್ಯತೆಯ
ವಿರಾಟರೂಪ ಪ್ರದರ್ಸದಿಸಲು
ನಿನ್ನ‌ ಕೃಪೆಗಾಗಿ ಕಾಯುತಿರಲು
ಎನಿತು ಕರುಣೆದೊರುವೆ ಕರುಣಾಮಯಿ

ಯಾವ ರೂಪದಲ್ಲಾದರೂ
ಎಂತಾದರೂ ಹೇಗಾದರೂ
ಹೇ ಪ್ರಯತ್ನ ಪರಮೇಶ್ವರ ಪ್ರಭುವೆ
ನೀನೊಮ್ಮೆ ದೃಗ್ ದರ್ಶನವಿಯಲು‌
ಯಾರ ಹಂಗೆನು ಭಯವೇನು ಪ್ರಭುವೆ
ನಿನ್ನ ಕೃಪೆಯ ಕಟಾಕ್ಷೆಯ ದಿಕ್ಷೆ ನನಗಾಗಿರಲು
****"
ಅನಿಕೇತನ ಪ್ರಿಯ
14/11/2009  ಶನಿವಾರ , 5:00AM
ನನಗೆ ಸರ್ಕಾರಿ‌ ಕೆಲಸ ಸಿಕ್ಕಿತು ಆದರೆ ಸೇಹ್ನೆಹಿತ ನಟರಾಜನಿಗೆ ಕೆಲಸ ಸಿಗದೇ ಹೊದಾಗ ನೋವಿನಿಂದ ಬರೆದದ್ದು
*******

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ