ತಲೆ ಎತ್ತಿ ನೋಡು ಒಮ್ಮೆ


ತಲೆ ಎತ್ತಿ ನೋಡು ಒಮ್ಮೆ

ಕಾಣದ ಲೋಕಕ್ಕೆ ಮತ್ತೆ ಮರಳಿ ಬಾರದ ಲೋಕಕ್ಕೆ
ಹೊರಳಿ ಹೋದರು ಮಗುವೆ  ..
ನನ್ನ ಒಡಲ  ಉಡಿಯಲ್ಲಿ ನೀ ಬೆಂದು ಬಳಲಿ ಬೇಯದಿರು
ಅಗೋ ನೊಡಲ್ಲಿ ಒಮ್ಮೆ ತಲೆಯತ್ತಿ ನೋಡು

ಬದಕು ಬರಿದಾಗಿಲ್ಲ
ಮೊಗದಷ್ಟು  ಉತ್ಸಾಹ ಚಿಮ್ಮುವದು ಕಂದ ತಲೆ ಎತ್ತಿ ನೋಡು ನೀ ಒಮ್ಮೆ

ಅತ್ತು ಸೋತು ಸೊರಗದಿರು
ನನ್ನ ಮಡಿಲ ಉಡಿಯು ನಿನಗಾಗಿ ನಿನ್ನ ಶ್ರೇಯಸ್ಸಿಗಾಗಿ ಸದಾ ಸನ್ನದ್ದವಾಗಿ  ನಿಂತಿದೆ

ಹೆದರದಿರು ಬೆಚ್ಚದಿರು ಬೆದರಿ ಬಳುಕದಿರು ..
ಜಗದಗಲ ಮುಗಿಲಗಲ
ಚಾಚಿ  ಆಶಾ ಭಾವಗಳನೆ  ಬಾಚಿ ತಬ್ಬಿ ಹಿಡಿದು ನೀ ನಿಲ್ಲು  ಉತ್ಸಾಹದ ಶಲೆ ಒಮ್ಮೆಕುಡಿಯೊಡೆಯುವದು
ನಿ ಒಮ್ಮೆ ತಲೆ ಎತ್ತಿ ನೋಡು

ಅನಿಕೇತನಪ್ರಿಯ
ಪ್ರಹ್ಲಾದ್ ವಾ ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ