ಮೇಲೆಳು ಮೊಮ್ಮಗಳೆ
(ಚಿತ್ರಕವನ ಕ್ಕೆ ಒಂದು ಕವನ)
ಮೇಲೆಳು ಮೊಮ್ಮಗಳೆ
ಮುದ್ದಾಗಿ ಸಾಕಿದ ಮದ್ದಾನೆಯಿದು
ಸದ್ದು ಗದ್ದಲವಿಲ್ಲದೆ
ಸತ್ತು ಹೊಯಿತಲ್ಲ ..
ತಲ್ಲಣಿಸದಿರು ಮಮ್ಮೊಗಳೇ
ನೊವು ನುಂಗಿ ನಿ ನಿರುಳ್ಮಳಾಗದಿರು
ಕೃರ ಜನರ ದಾಹಕೆ ಬಲಿಯಾಗುವ ಮೂಕ ಪ್ರಾಣಿಗಳ ಗೋಳು ಕೇಳುವರು ಯಾರಿಲ್ಲವೆಂದು ನೀ ಮರುಗದಿರು ಮೊಮ್ಮಗಳೇ..
ವೇದನೆ ನೋವು ಹತಾಸೆಯಿಂದ ಜನರ ಕಣ್ಣು ತರೆಸಲು ಸದ್ಯವಿಲ್ಲ ,.
ಕೃರತ್ವಕೆ ಹಿಡಿ ಶಾಪ ಹಾಕಿದರೂ ಪ್ರಯೋಜನವಿಲ್ಲ ..
ದುರಾಸೆಗಳ ದೂರಮಾಡದೆ ಇದಕೆ ಎಣೆಯಿಲ್ಲ ಅರಿತುಕೊ
ಏಳು ಕಂದಾ, ಒಂದಿಷ್ಟು ಹೊಸತನದ ಬದಲಾವಣೆಯ ಕನಸು ಕಟ್ಟೊಣ. ಏಳು ಎದ್ದೇಳು..
ಕೃರತ್ವದ ಕೆಲಸಕ್ಕೆ ದಿಕ್ಕಾ ಹಾಕೋಣ ಏಳು ..
ಮನದಲ್ಲಿ ಬತ್ತಿಹೊದ ಮಾನವಿಯತೆಯ ಬಡಿದೆಬ್ಬಿಸೋಣ ಏಳು ಎದ್ದೇಳು .
ಏಳು ಮೊಮ್ಮಗಳೇ ಏಳು ಮಮ್ಮಲ ಮರುಗಿ ವೆಥೆ ಪಟ್ಟು ಕಥೆ ಹೆಣೆದರೆ ಈ ಸಾವಿಗೆ ನ್ಯಾಯ ಸಿಗಲಾರದು . ಏಳು ಏದ್ದೆಳು
ಉಸಿರ ಬಿಗಿ ಹಿಡಿದು
ರೊಷಾವೇಷವ ಕಟ್ಟಿ ನಿಲ್ಲಿಸಿ
ಕರುಣೆಯ ಕಡೆಗೊಲಿನಿಂದ ಮಥಿಸಿ ಹೊಸ ಭಾವ ಬೀಜ ಭಿತ್ತೊಣ. ಮೇಲೆಳು
***
ಅನಿಕೇತನ ಪ್ರಿಯ
ಪ್ರಹ್ಲಾದ್ ವಾ ಪತ್ತಾರ
ಕಾಮೆಂಟ್‌ಗಳು