ಮೈ ಮಾಂಸ

ಮೈ ಮಾಂಸ

ಅನಾದಿ ಕಾಲದಿಂದಲೂ
ನನಗೆ ಜೀವನ ಸಾಥಿಯಾಗಿ
ನೀ ನನ್ನೊಡನೆ ಹೆಜ್ಜೆಹಾಕಿದೆ...
ನನ್ನ ಏರಿಳಿತದ ಬದುಕಿಗೆ
ಸದಾ ಆಸರೆಯಾಗಿ ಆಶ್ರಯವಿತ್ತೆ..

ನಿನ್ನ ಸಗಣಿಯಿಂದ ಆದಿಯಾಗಿ
ನಿನ್ನ ಕ್ಷೀರಾಮೃತವರೆಗೂ
ನನಗೆ ದಾನಮಾಡಿ ಧಾರೆಯರೆದೆ

ನನ್ನ ಬದುಕಿಗೆ ಊರುಗೊಲಾಗಿ
ನಾ ಅತ್ತಾಗ ಅತ್ತು ನಕ್ಕಾಗ ನೀನು ನಕ್ಕು
ಬದುಕಿಗೆ ಸದಾ ಜೀವ ತುಂಬಿದೆ
ನೀ ನನ್ನ ಬದುಕಿನ ಜೀವಶಲೆಯಾಗಿ
ಬಾಳು ಹಸನಮಾಡಿದೆ ..
***
ದಾಹ  ಇಷ್ಟಕ್ಕೂ ತೀರದೆ ಹಪಹಪಿಸಿ
ನಿನ್ನ ಮರಿ ಮಕ್ಕಳನ್ನು ಕೊಂದು ತಿಂದೆ
ನೀ ಮುದಿಯಾದಾಗಲೂ ಚರ್ಮ ಸುಲಿದೆ
ಮಾಂಸ ಎಲುಬು ಕೊಬ್ಬು ಚರ್ಮದಲ್ಲೂ
ವ್ಯಾಪಾರ ವೈಹಿವಾಟುಮಾಡಿ ಲಾಭವೂ ಗಳಿಸಿದೆ
ಎಲ್ಲವೂ ಸಹಿಸಿ ನನ್ನ ಬದುಕಿಗೆ ಊರುಗೊಲಾಗಿ
ನನ್ನ ಬಾಳಬೆಳಕಿಗೆ ದಾರಿ ದೀಪದಂತೆ ಕಂಗೊಳಿಸಿದೆ
***
ಇಷ್ಟೂ ಸಾಲದೂ ಎಂಬಂತೆ
ನಿನ್ನ ಹೆಣದ ಮೇಲೆ ರಾಜಕೀಯದ
ಬಾಜಿ ಕಟ್ಟೊ ಕೆಲಸಕ್ಕೂ ಕೈ ಹಾಕಿದ್ದಾಯಿತು
ಇನ್ನ ಖಂಡ  ತಿಂದು  ತೇಗೂವೆನೆಂದು
ತಿನ್ನಲೂ ಬಿಡಲಾರೆ ಎಂದೂ
ಗುಂಪು ಘರ್ಷಣೆಯ ನಾಟಕದ ಆಟವೂ ಹೂಡಿದೆ
ಓಟಿನ ರಾಜಕೀಯದಾಟವೋ
ಮುಗ್ದ ಜನರ ಬಾವನೆಗಳೋ
ಹಠಮಾರಿ ಧೊರಣೆಯೋ
ಒಟ್ಟಾರೇ  ನಿನ್ನ ಹೆಣ  ದಾಳವಾಗಿ  ಬಳಸಿಕೊಂಡೆ
ರಾಜಕೀಯದ ಚದುರಂಗದ ಆಡದಲ್ಲಿ
ನೀನ್ನನ್ನೂ ಎಳೆದು ತಂದು ಕೂಡಿಸಿ
ಮಜಾ ನೊಡುವ ವಿಕೃತ ಮನಸ್ತಿತಿಗೆ ತಲುಪಿದೆ
ಇದು ನನಗೆ ಅಗತ್ಯವೊ  ಅನಿವಾರ್ಯ ವೋ
ನನ್ನ ರಾಜಕೀಯದ ಅಸ್ತಿತ್ವಕ್ಕೆ (ಕು)ತಂತ್ರಕ್ಕೆ
ನಿನ್ನ   ಮೈ ಮಾಂಸ ಜ್ವಲಂತ ಸಮಸ್ಯೆಯಾಗಿ ಉಳಿಸಿದೆ
***
ಅನಿಕೇತನಪ್ರಿಯ
( ಗೋಮಾಂಸದ ಪರ ವಿರೋಧದ ಆಭಾಸ ಕಂಡು ಗಿಚಿದ್ದು 4-7-2017 ರಾತ್ರಿ 11 )

ಪ್ರಹ್ಲಾದ್ ವಾ ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ