ನಿನ್ನೋಳಗಿನ ನೀನು

*ನಿನ್ನೋಳಗಿನ ನೀನು *
ಮೂರು ದಿನಗಳ ಬಾಳಬಟ್ಟೆಯ ಸಂತೆಯಲಿ
ಇದಕೊ ಅದಕೊ ಎದಕೊ ಸದಾ ಚಿಂತೆಯ ಕಂತೆ ತೀರಿದು ತೀರುವವೆ ಇವು ಅವು ಪಯಣದಂಚಿನಲಿ ?

ಸದಾ ದುಃಖ ಕೂಪದಲಿ ನೀನೆ ಮಿಂದೆದ್ದು
ಏಕೆ ಶಪಿದುವೆ ನೀನೇ ನಿನ್ನ ಹಣೆಬರಹಬಿಂದು ?
ಅಂತ್ಯದಂತ್ಯದಲಿ ನೋವು ಮರೆಯಲೆಂದು
ಹಠಹಿಡಿದು ಹೊರಟೆ  ಕಾಣದಂತೆ  ನೀ ಏಲ್ಲಿಗೆ ?
ತನುವಿನ  ತೃಷೆಯ ಮಾಟಕೆ ಮನವ ಮಣಿಸದೇ
ದುಃಖ ಎಂದು ದೂರವಾಗಬಲ್ಲದು ನಿನ್ನಲ್ಲಿಯೇ ?
ಅನಂತಾನಂತ ಆಶಾವಿಷಯ ತೀರಲೆಂದು
ಛಲಪಿಡಿದು  ಹೊರಟೆ ನೀ ಎಲ್ಲಿಗೆ ?
ಮನದ ಬಯಕೆ ಬಿಸಿಲುಗುದರೆ ಏರಿ
ಬಳಲಿ ಬೆಂಡಾಗಿ ಬಂದು ಸೇರಿದೆ ಎಲ್ಲಿ ?

ನಿನ್ನೊಳಗಿನ ನೀನರಿಯದೇ
ಅಂತರಂಗದ ಕದವತಟ್ಟದೆ
ಎಂದಾದರೂ ದುಃಖ ದೂರವಾಗಬಲ್ಲದೇ

ಬಾಳಹಾದಿಯ ಕದನದಂಚಿನಲಿ
ನಾ ಶಾಂತಿ ಧೂತನಾಗುವೆನೆಂದು
ಯಾವ ಮಂತ್ರ ತಂತ್ರ ಅರಿತರೇನು ?
ದೇವಾದಿ ದೇವರ ಗುಡಿ ಹೊಕ್ಕರೇನು
ಮನಶುದ್ದಿಗೆ ಮುಕ್ಕೊಟಿ ದೇವರ ಗೊಗರೆದರೇನು ?
ಆ ಕ್ಷಣ ಚಿರವಿಜಯ ವೈಜಯಂತಿ ದೊರೆವದೆ ?
ಮನದ ದುಃಖ ದೂರವಾಗಬಲ್ಲದೇ ?

ಮನದ ಮೈಲಿಗೆ ಮಾಡಿಕೊಂಡು
ಮಡಿ ಮಡಿ ಎಂದು ಮೂರು ಹೊತ್ತು ತಿರುಗಿ
ಓಡಾಡಿ ಬಂದು ಅಯೋ ಎಂದು ಕುಳಿತೊಡೆ
ಮನದ ದುಃಖ ದೂರವಾಗಬಲ್ಲದೇ?

ಬದುಕಿನಲಿ ಏನೋ  ಕಳೆದುಕೊಂಡೆಯಂದು
ಪಡೆಯಲರಸಿ ತಿರುಗಿ ಮುರುಗಿ ಹೊರಟೆ ಏಲ್ಲಿಗೆ ?
ದಮಸೀದಿ,ಚರ್ಚು,ಆಲಯ, ತಿರುಗಿ ಬಂದು
ಕೊನೆಗೆ ಎಲ್ಲವೂ ಎಲ್ಲರನೂ ಶಪಿಸಿ ಕೊರಗುವದೆಕೆ ?

ನಿನ್ನೋಳಗಿನ ಮನದ ಬಾಂದನಿಯ ಅರಸಿ ಅರುಹಿಕೊಳ್ಳದೇ , ಚೈತನ್ಯಚಿಗುರೊಡೆಯಬಲ್ಲದೆ ಅನಿಕೇತನಪ್ರೀಯ ..

ಪ್ರಹ್ಲಾದ್. ವಾ. ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ