ಹೆಮ್ಮೆ ಪುತ್ರರತ್ನರಾಗೋಣ

ಸನ್ನಡತೆಯ ಸತ್ ಶೀಲಗುಣವಿರುವ
ಮನದಲ್ಲಿ ಮೃಧು ಮಧುರತೆಯಿರುವ
ಸದಾ ಸತ್ ,ಚಿತ್ , ಆನಂದವಾಗಿರುವ
ಸದ್ವೀನಿಯೋಗದ ಜ್ಞಾನಾಮೃತವಿರುವ
ನಿನ್ನಾತ್ಮವಂ ಪರರಲ್ಲಿ ಬೆರೆಸುವಗುಣವಿರುವ
ಸಜ್ಜನಿಕೆಯ ಜೀವನದ ವಾಸ್ತವಿಕತೆ ಸಾರುವ
ಮಾನವೀಯತೆ ಮೈಗುಡಿಸಿಕೊಂಡಿರುವ
ಸತ್ ಚಾರಿತ್ರ್ಯದ ಸನ್ನಡತೆಯಿರುವ
ಜೀವನದ ಸತ್ಯದರ್ಶನಕ್ಕೆ ಸದಾ ಪ್ರೇರೆಪಿಸುವ
ವೈಚಾರಿಕ ವೈಜ್ಞಾನಿಕ ಗುಣ ಸ್ವಭಾವವಿರುವ
ನೈತಿಕತೆಯನ್ನು ನಿತ್ಯ ಸಾರಿ ಹೇಳುವ
ನೊಂದ ಮನಕೆ ಸಂತೈಸಿ ಸಾಂತ್ವಾನವಿಯುವ
ನಿರೀಕ್ಷೆ  ಪ್ರತಿಫಲ ಭಯಸದೇ ಮುನ್ನುಗ್ಗುವ
ವಾಸ್ತವದ ನೆಲೆಗಟ್ಟಿನಲ್ಲಿ ಚಿಂತನೆಗೈಯುವ
ಧೀರದಿಟ್ಟತನದಿ ಬೆದರದೆ ಬೆಚ್ಚದೆ ಮುನ್ನಡೆವ
ಅನುಭದ ಜ್ಞಾನಾಮೃತದ ಸುಧೆ ಸದಾ ಅರಸುವ
ತಾಯಿ ಭಾರತಿ , ಸಂಸ್ಕೃತಿ  ಜಗಕೆ ಸಾರುವ
ಹೆಮ್ಮೆಯ ಧೀರ ಪುತ್ರರತ್ನಗಳು ನಾವಾಗೋಣ
ಎಂದ ನಮ್ಮ   ಅನೀಕೇತನ ಪ್ರಿಯ
****
ಪ್ರಹ್ಲಾದ್ .ವಾ. ಪತ್ತಾರ

ಕಾಮೆಂಟ್‌ಗಳು

ಈ ಬ್ಲಾಗ್‌ನ ಜನಪ್ರಿಯ ಪೋಸ್ಟ್‌ಗಳು

ಹೊಸ ತಾಲ್ಲೂಕು, ಯಡ್ರಾಮಿ ನಗರಕ್ಕೆ ಬೇಕಿದೆ ಹೊಸ ಕಾಯಕಲ್ಪ

ಅವ(ಳು) ನಾ ನಾದೆ

ನಿಮಗೆಲ್ಲ ನೆನಪಿದೆ ತಾನೆ