ಮುಗುಳು ನಗೆ
ಈ ಮುಗುಳು ನಗೆ ನಿನಗಾಗಿ ನಲ್ಲ .
ಅದು ಬರಿ ನಗು ಅಲ್ಲ . ವಿರಹದ ತಾಪದ ಜ್ಷಾಲೆಯಲ್ಲೂ ಉರಿದು ಉರಿದು ಭೂದಿಯಾಗದೇ ಉಳಿದ ... ನಸು ಗೆಂಪಿನ ತುಟಿಯ ಕೆಂದೆಲೆ..
ಈ ಕೆಂದೆಲೆಯ ಬಣ್ಣದ ಉಡುಗೆ ಉಟ್ಟು , ನಿನ್ನ ಬರುವಿಗಾಗಿ ಕಾದು ಕುಳಿತ ನನಗೆ , ..ಬರಿ ಹತಾಸೆ, ನೋವು, ನಿರಾಸೆ..
ಬಾಡದ ದಾಹದಲ್ಲಿ ರಾತ್ರಿನೆನಪಿನಲ್ಲಿ ನೀ, ಕನಸಲ್ಲಿ ಕಂಗೊಳಿಸುವೆ .
ಆಗ ಬಿಗಿದಪ್ಪಿ ಕೊಡು ಮಲಗುವ ಆಸೆ ..
ಎಚ್ಚರವಾದೊಡನೆ ಅದು ನಿಜವಲ್ಲ ಬರಿ ನಿರಾಸೆ ..
ಆದರೂ, ನನ್ನ ಕೆಂದುಟಿ ಮೇಲೆ ಒಂದು ಕಿರು ನಗೆ ಇರುವದು ..
ಅದು ಸದಾ ನಿನ್ನ ಬರುವಿಗಾಗಿ ಕಾದಿರುವದು..
ಕಾಮೆಂಟ್‌ಗಳು