ಕಲ್ಲು
ಕಲ್ಲು
ಸಂದರ್ಶನ ಸಮಯ ಬಂದಾಗಿತ್ತು...
ಶಿಸ್ತುಬದ್ಧವಾದ ಉಡುಗೆ ತೊಟ್ಟುಕೊಂಡು ಮರೆವ್ವ ಸಂದರ್ಶನದ ಕೊಣೆಯೊಳಗೆ ನಡೆದಳು.ಪ್ರಾಸ್ತಾವಿಕವಾಗಿ ಸಂದರ್ಶನಕಾರರಿಂದ ಒಂದೆರಡು ಪ್ರಶ್ನೆಗಳೂ ಹೊರಬಂದವು.. ಮಾತಿನ ದಾಟಿ ಬದಲಾಯಿಸುತ್ತಲೇ ನಿಮ್ಮ ಪ್ರತಿಭೆಗಿಂತ ಸೌಂದರ್ಯಕ್ಕೆ ನಾವು ಮಾರುಹೊಗಿದ್ದೆವೆಂದು ಸಂದರ್ಶನಕಾರ ಹೇಳಿದ.ಮರೆವ್ವ ಧನ್ಯವಾದಗಳು ಸರ್ ,ಎನ್ನುವಷ್ಟರಲ್ಲೇ ನಿಮಗೆ ಈ ಜಾಬ್ ಅತ್ಯಂತ ಸೂಕ್ತ ..ಇದು ಅಗತ್ಯವಾಗಿದೆಯೆ? ಎಂದು ಕೇಳಲೂ ಮರೆಯಲ್ಲಿಲ್ಲ.ಸಂದರ್ಶನಾರ..ಮರೆವ್ವ ಹೌದು ಸರ್ ಅತ್ಯಂತ ಅಗತ್ಯವಾಗಿ ಬೇಕಾಗಿದೆ ಎಂದು ಉತ್ತರಿಸಿದಳು. ಹಾಗಾದರೆ ನಿಮಗೆ ಈ ಉದ್ಯೋಗ ಖಚಿತ ಎಂದು ಭಾವಿಸಿಕೊಳ್ಳಿ. ಆದರೆ, ..ಆದರೆ, ..ಎಂದು ರಾಗ ಎಳೆದ ಸಂದರ್ಶನಕಾರ.ಮರೆವ್ವ ಏನು ಹೇಳಿ ಸರ್ ಯಾವ ಅಡತಡೆ ಇದೆ? ಈ ನೌಕರಿ ಮಾಡುವ ಅರ್ಹತೆಗಳು ನನ್ನಲ್ಲಿ ಇಲ್ಲವೆ? ಹೇಳಿ ಎಂದಾಗ ಹಾಗೆನೂ ಇಲ್ಲ.ನಿಮಗೆ ನೌಕರಿ ಖಂಡಿತ ಸಿಗುವದು .ಆದರೆ ಅದಕ್ಕೆ ಪ್ರತಿಯಾಗಿ ನೀವು ನನಗೆ ಏನಾದರು ಸಂಭಾವನೆ ನೀಡಲೇ ಬೇಕು ಎಂದ ಸಂದರ್ಶನಕಾರ.ಅಂದರೆ ನಿಮ್ಮ ಮಾತಿನ ಅರ್ಥವೇನು? ಲಂಚನೀಡಬೇಕೆ ಅದು ನೀಡಲು ಸಾದ್ಯವಿಲ್ಲ,ನಾನು ಬಡವಿ ಮೇಲಾಗಿ ನಿರ್ಗತಿಕಳು ಸರ್ ಕ್ಷಮಿಸಿ ಎಂದಳು ಮರೆವ್ವ.ಸಂದರ್ಶನಕಾರ ಅಯೋ ನಾನು ನಿಮ್ಮಿಂದ ಲಂಚ ಕೇಳುತ್ತಿಲ್ಲ ಹಣದ ಅಗತ್ಯವೂ ನನಗಿಲ್ಲ.ನಾನು ವೃತ್ತಿಯ ಕರ್ಥವ್ಯದಲ್ಲಿ ಅತ್ಯಂತ ಪ್ರಾಮಾಣಿಕ , ನನ್ನ ಈ ಗುಣ ಮೆಚ್ಚಿ ಸರ್ಕಾರ ನನಗೆ ಪ್ರಮೊಷನ್ ನೀಡಿ ಗೌರವಿಸಿತು.ನಿಮ್ಮಿಂದ ನಾನು ಒಂದು ನೈಯಾಪೈಸೆಯೂ ನಿರಿಕ್ಷಿಸಲಾರೆ.ಲಂಚವೆಂದರೆ ಹಣವೆ ಅಲ್ಲ.ಆಗಲೆ ಹೇಳಿದೆನಲ್ಲ ನಿಮ್ಮ ಸೌಂದರ್ಯ ನನ್ನ ಮೊಡಿ ಮಾಡಿತು ನಾನು ಮಾರುಹೊಗಿದ್ದೇನೆ. ಮರೆವ್ವ ಸರ್ ನಿಮ್ಮ ಮಾತಿನ ಒಳಾರ್ಥ ನನಗೆ ಅರ್ಥವಾಗುತ್ತಿಲ್ಲ ಬಿಡಿಸಿ ಹೇಳಿ ಎಂದಾಗ, ...ನಿಮ್ಮ ಸೌಂದರ್ಯವನೊಮ್ಮೆ ನನಗೆ ಧಾರೆ ಎರೆದರೆ ಸಾಕು,ನಿಮ್ಮನ್ನು ಹುಟ್ಟುಡುಗೆಯಲ್ಲಿ ನೋಡುವ ಆಸೆ ನನಗಾಗಿದೆ ಎಂದು ಅರುಹಿದನು ಸಂದರ್ಶನಕಾರ...ಮರೆವ್ವ ಕೊಂಚವೂ ವಿಚಲಿತರಾಗದೆ ಅಯ್ಯೋ ..ಶೀಲವೆ..ss ? ಎಂದು ಗಹಗಹಿಸಿ ನಕ್ಕರು.ಈ ಶೀಲದ ಪರಿವು ಅರಿವಿನ ಬಗ್ಗೆ ನಾನೂ ಯಾವತ್ತೋ ತ್ಯಾಗಮಾಡಿಯಾಗಿದೆ.ಇದರ ಅಗತ್ಯವೂ ನನಗೆ ಇಲ್ಲ. ನನ್ನ ಶೀಲ ಅಪಹರಣವೆ ..sss ? ಎಂದು ನಿಟ್ಟುಸಿರು ಬಿಟ್ಟಳು. ತಮ್ಮಮರೆವ್ವಳ ಮಾತಿನ ದಾಟಿ ಅವಳ ದಯನೀಯಲ್ಲಿರುವ ಅಸಾಹಕ ಅಂತರಾಳದ ಭಾವನೆಗಳ ಸ್ಥಿತಿಯ ಬಗ್ಗೆ ಕಿಂಚಿತ್ತು ಚಿಂತಿಸದ ಸಂದರ್ಶನಕಾರ ,ಮಾತು ಮುಂದುವರೆಸಿ...ಇಗೋ ನೊಡಿಲ್ಲಿ ನಿಮ್ಮ ನೌಕರಿಯ ಆದೇಶ ಪತ್ರ ಆಗಲೇ ಸಿದ್ದವಾಗಿದೆ.ಕೇವಲ ನಿನ್ನ ಹೆಸರುಬರೆದು ನನ್ನ ಸಹಿ ಆದರೆ ಸಾಕು. ನೀವು ಹೂ ಎಂದರೆ ಅಷ್ಟೆ ಬೇರೆ ಏನನ್ನೂ ಕೇಳಲಾರೆ...
ಮರುದಿನ ಮರೆವ್ವ ನೌಕರಿ ಆದೇಶದೊಂದಿಗೆ ಕೆಲಸಕ್ಕೆ ಹಾಜರಾಗಿದ್ದಳು.ಸಾದ್ಯವಾದಷ್ಟು ತನ್ನ ಕರ್ತವ್ಯದ ಪರಿಧಿಯಲ್ಲಿ ನಿಷ್ಠೆಯಿಂದ ಪ್ರಾಮಾಣಿಕವಾಗಿ ಕಾರ್ಯನಿರ್ವಹಣೆ ಮಾಡುತ್ತಾ ದಿನಕಳೆಯುತ್ತಿದ್ದಳು..
ಒಮ್ಮೆ ಸ್ಥಳೀಯ ರಾಜಕೀಯ ಪುಡಾರಿಯು ಒಂದು ಪೈಲ್ ಕೈಯಲ್ಲಿ ಹಿಡಿದುಕೊಂಡು ಮರೆವ್ವ ಇದ್ದ ಚೆಂಬರ್ ಗೆ ನುಗ್ಗಿದನು. ಬಹಳ ಗತ್ತಿನಿಂದಲೇ ಮರೆವ್ವಗೆ..ನೀವು ತುರ್ಥಾಗಿ ಈ ಪೈಲ್ ನ ಅಪ್ರೂಲ್ ಮಾಡಲೇ ಬೇಕು ನನಗೆ ಸಮಯ ಇಲ್ಲ ಎಂದವನೆ ತರಾತುರಿಯಲ್ಲಿ ಪೈಲ್ ತೆರೆದಿಟ್ಟು ಸಹಿ ಮಾಡಬೇಕಾದ ಸ್ಥಳವೂ ಗುರುತಿಸಿಕೊಟ್ಟನು.ಮರೆವ್ವ ಪೈಲ್ ನ ಒಂದೊಂದೆ ಹಾಳೆ ತೆರೆಯುತ್ತಾ ಸಾಗಿದಳು..
*****
ಸುಂದರವಾದ ಪ್ರಕೃತಿಯ ಮಡಿಲ ಸಿರಿಯಲ್ಲಿ ಎರಡು ಮೂರು ಬೆಟ್ಟಗಳ ಸಾಲು,..ಅಲ್ಲಲ್ಲಿ ಅದಾರೋ ತಂದು ಚಲ್ಲಿದರೋ ಆ ಕಲ್ಲು ರಾಶಿ ರಾಶಿ! ಕೆಳಗೆ ತಿಳಿನೀರ ಕೆರೆಯಲ್ಲಿ ಅರಳಿ ನಿಂದ ಕಮಲಗಳು ಕೈಮಾಡಿ ಕರೆಯುತಿವೆ ನೋಡು ನಾನು ಎಷ್ಟು ನಿಷ್ಕಲ್ಮಷವೆಂದು. ಕೆರೆಯ ಅಣತಿದೂರದಲ್ಲಿ ಹರಕು ಮುರಕಿನ ಹತ್ತಾರು ಗುಡಿಸಲುಗಳಿರುವ ಪುಟ್ಟ ಗ್ರಾಮ.ನಾಗರಿಕ ಸಮುದಾಯದಿಂದ ಬಹುದೂರವೆ ಉಳಿದ ಊರು.ಯಾರಾದರೂ ಹೊಗಿ ಬರಲು ಕಾಲ್ದಾರಿಯೇ ಈ ಊರಿಗೆ ದೊಡ್ಡ ರಾಜ ಮಾರ್ಗ.ಊರ ಜನರಂತೂ ಬೆಳಿಗೆ ಸೂರ್ಯನ ಜೋತೆ ಎದ್ದು ಕುಳಿತವರೆ ತಡ ,ಒಂದಿಷ್ಟು ಆಹಾರ ಸೆವನೆಯ ಶಾಸ್ತ್ರ ಮುಗಿಸಿಕೊಂಡು,ಹಟ್ಟಿಯಲ್ಲಿ ಮಲಗಿದ್ದ ಕುರಿಗಳಿಗೆ ಒಂದು ಕೂಗುಹಾಕಿ ಒಂದು ಕೊಲುಹಿಡಿದು ಕಲ್ಲು ತುಂಬಿದ ಗುಡ್ಡದತ್ತ ಹೊರಟರೆಂದರೆ ಇವರಿಗೆ ಮತ್ತೆ ಮರಳಿ ಮನೆ ನೆನಪಾಗುವದು ಸೂರ್ಯ ಕಣ್ಮರೆ ಯಾದಾಗಲೆ ಮದ್ಯಾಹ್ನದಹೊತ್ತಲ್ಲಿ ದೇಹ ದಣಿವಾಗಿ ಹಸಿವಾದರೆ,ಕುರುಚಲು ಕಾಡಿನಲ್ಲಿ ಬಳೆದ ಸಣ್ಣ ಕಾಯಿ ಪಿಚುಗಳೆ ಆಹಾರ.ಕೆಲವೊಮ್ಮೆ ಇಲಿಯ ಬಿಲದಲ್ಲಿ ಒಂದಿಷ್ಟು ಹೊಗೆಹಾಕಿದಾಗ ಬಲೆಗೆ ಸಿಕ್ಕ ಇಲಿಗಳಿಗೆ ಉಪ್ಪು ಖಾರ ಹಾಕಿ ಗುಳುಮ್ ಎಂದು ನುಂಗಿ ಕೆರೆ ದಡದ ನೀರು ಕುಡಿದರೆ ಮೂಗಿಯಿತು ಮೃಷ್ಟಾನ್ನ ಭೋಜನದ ಬಾಡುಟ.ಹಿರಿಯರಿಂದ ಬಳುಬಳಿಯಾಗಿ ಬಂದ ಒಂದಷ್ಡು ಜನಪದ ಸೊಗಡಿನ ಆಚಾರ ವಿಚಾರವೆ ಇವರ ಬದುಕು.ಕಾಡು ಬೆಟ್ಟಗುಡ್ಡ ಮಟ್ಟಮಾಡಿ ಜಿವನಾದಾರಕ್ಕೆ ಉಳುಮೆ ಮಾಡುವದು ,ಕುರಿ ಮೆಯಿಸುವದೆ ಇವರ ನಿತ್ಯ ಬದುಕು. ಜೀವನಿರ್ವಹಣೆಗೆ ಬೇಕಾದ ಒಂದಿಷ್ಟು ಅಗ್ಯವಸ್ತುಗಳಿಗಾಗಿ ಹತ್ತಾರು ಮೈಲಿನಡೆದು ,ಅಷ್ಟೋ ಇಷ್ಟೋ ಕೂಡಿಹಾಕಿದ ಕುರಿ ಸಂತೆಯಲ್ಲಿ ಮಾರಿ ಕಾಸು ಪಡೆದು ಮುಕ್ಕಾಲು ಹಣ ಸಾರಾಯಿ ಅಂಗಡಿಗೆ ಸುರಿದು, ಕಂಠಪೂರ್ತಿ ಕುಡಿದು ಸೊಂಟ ಅಲುಗಾಡಿಸುತ್ತಾ ,ಮಿಕ್ಕಿದ ದುಡ್ಡಿನಲ್ಲಿ ಅಷ್ಟೊಇಷ್ಟೋ ಏನೋ ತಗೊಂಡು ಹಟ್ಟಿಕಡೆ ನಡೆದರೆ ಮೂಗಿಯಿತು ಇವರ ಸಂತೆ.ಇದರಾಚೆಯ ಬದುಕು ಇವರಿಗೆ ಗೌಣ...ಯಾವತ್ತು ಕಂಡು ಕೇಳರಿಯದ ಆಧುನಿಕ ಬದುಕು ಇವರಿಗೆ ವರ್ಜ.
*****
ಮರೆವ್ವ ಪೈಲ್ ನ ಒಂದೊಂದೆ ಪುಟ ತಿರುವುತ್ತರುವಂತೆ ತಿರುವುತ್ತಾ...ತಾನು ಬೆಳೆದ ಊರ ಪರಿಸರವೆಲ್ಲ ಕಣ್ಣಲ್ಲಿ ಕಟ್ಟಿ ನಿಲ್ಲುಸಿದಳು. ಹಳೆಯ ನೆನಪುಗಳ ಹಾಯ ದೋಣಿಯಲ್ಲಿ ತೇಲಾಡಿದ ಅನುಭವ ಅವಳಿಗಾಯಿತು ಮರೆವ್ವಳ ಕೈಯಲ್ಲಿದ್ದ ಆ ಪೈಲ್ ತಾನು ಬೆಳೆದ ಊರಿನ ಸೂತ್ತಮುತ್ತಲಿನ ಪರಿಸರದ ಕುರಿತಾದದ್ದಾಗಿತ್ತು...
ಮರೆವ್ವಳ ಊರು ರಾಜ್ಯದ ಗಡಿಭಾಗಕ್ಕೆ ಹೊಂದಿಕೊಂಡ ಅತ್ಯಂತ ಕೇಳಸ್ಥರದ ಮೂಲಭೂತ ಸೌಲಭ್ಯಗಳೂ ಕಾಣದ ಕುಗ್ರಾಮ.ಮರೆವ್ವಳಿಗೆ ತನ್ನ ಬಾಲ್ಯಾವಧಿಯಲ್ಲೆ ತಂದೆ ತಾಯಿ ಭಲಾಡ್ಯರ ದರ್ಪ ದೌರ್ಜನ್ಯಕ್ಕೆ ಬಲಿಯಾಗಿ ಹೋಗಿದ್ದ ನೆನಪು ಇನ್ನು ಹಸಿ ಹಸಿ ಯಾಗಿಯೆ ಇತ್ತು. ಅವರಿವರ ಆಶ್ರಯ ಅರಸಿ ಬಾಲ್ಯದುಕಿದ್ದಳು..ಇದರ ನಡುವೆ ಅದೆನೋ ಶಾಲೆಗೆ ಹೋಗುವ ವಿಪರಿತ ತುಡಿತ ಆಕೆಗೆ .ಸರ್ಕಾರ ಕೊಟ್ಟ ಹರಕಲು ಸೌಲಭ್ಯ ಬಳಸಿಕೊಳ್ಳುವ ಹಂಬಲ.ಶಿಕ್ಷಣಪಡೆಯಲು ಎಂಥಾ ಸಂಕಷ್ಟ ಎದುರಿಸುವ ಎದೆಗಾರಿಕೆ ಅವಳದು . ದೂರದೂರಿನಲ್ಲಿ ಇರುವ ಶಾಲೆಗೆ ಹೋಗಲು ಸದಾ ಹಂಬಲ, ಶಾಲೆಯ ಮಾರ್ಗ ಮದ್ಯ ಕಾಣುವ ಹಾವು ಸಣ್ಣಪುಟ್ಟ ಪ್ರಾಣಿಗಳಿಗೆ ಅಳುಕದೆ ಮುನ್ನಡೆವ ಮನಸ್ಸು. ಇನ್ನೂ ,ಶಾಲೆಯೋ ಹೆಸರಿಗೆ ಮಾತ್ರ ಇದ್ದು,ಅದೊಂದು ಪಳೆಯುಳಿಕೆಯಂತೆ ಕಂಗೊಳಿಸುತ್ತಿತ್ತು.ಯಾವ ಮೂಲಭೂತ ಸೌಲಭಗಳು ಇಲ್ಲದೆ ಕನಿಷ್ಟ ಪಕ್ಷ ಶಿಕ್ಷಕರ ದರ್ಶನವಾದರೂ ಮಾಡುವ ಭಾಗ್ಯಮಕ್ಕಳಿಗೆ ಇರಲಿಲ್ಲ. ಅಮವಾಸೆ ಹುಣ್ಣಿಮೆಗೆ ಬರುವ ಸಹಪಾಠಿಗಳ ಜೊತೆಗೂಡಿ ನಲಿಯುವ ಭಾಗ್ಯವೂ ಮರೆವ್ವಳಿಗೆ ಇರಲ್ಲಿಲ್ಲ....ಆದರು ಛಲಬಿಡದೆ ಶಾಲೆಗೆ ಬರುವದು ಯಾವತ್ತು ತಪ್ಪಿಸಿರಲ್ಲಿಲ್ಲ ಮರೆವ್ವ.
ನಿತ್ಯವೂ ಶಾಲೆಯ ದರುಶನ ಪಡೆದು, ನಿರಾಶಳಾಗಿ ದೂರದ ದಾರಿ ಸಮೆಸಲು ಒಲ್ಲದ ಮನಸ್ಸಿನಿಂದ ಹೆಜ್ಜೆ ಕಿತ್ತಿಡುತ್ತಾ,ನಡೆದು ಹೊರಟರೆ,..ಸದಾ ನನ್ನ ಬರುವನ್ನೆ ನಿರಿಕ್ಷಿಸಿ ಹೊಂಚುಹಾಕಿ ಕಾದು ಕುಳಿತ ರಣ ಹದ್ದುಗಳು.ಕಾಮದ ಮದವೆರಿದ ಈ ರಣ ಹದ್ದುಗಳು ಅದೆಷ್ಟು ಬಾರಿ ಮರೆವ್ವಳ ಎಳೆದೊಯಿದು ತಂದವೋ? ಇದಾವುದರ ವ್ಯಥೆಯಾಗಲಿ ಸಿಟ್ಟಾಗಲಿ ರೋಷಾವೇಶವಾಗಲಿ ಯಾವತ್ತುಮಾಡಿದವಳಲ್ಲ. ನಿತ್ಯವೂ ಪ್ರತಿಭಟಿಸಿ ಹೊರಾಡಲು ಇದನ್ನು ದೊಡ್ಡಸುದ್ದಿ ಮಾಡಲು ಅವಳ ಬಳಿ ಅದಾವ ಬಲವೂ ಇರಲಿಲ್ಲ. ಮೆಲಾಗಿ ಅವಳಿಗಾದ ನೊವಿನ ವ್ಯಥೆಯಾಗಲಿ ,ನಷ್ಟದಪರಿವಾಗಲಿ, ಇರಲೇ ಇಲ್ಲ.ದೇಹದಾಯಿಗಳು ಎಳೆಯ ದೇಹ ನುಂಗಿ ನೀರು ಕುಡಿಯುವ ಪರಿವೆ ಇರಲಿಲ್ಲ...
ಮರೆವ್ವಳು ಕುರಿಗಾಯಿಯಾಗಿಯೋ, ಕಾಡು ಬೆಟ್ಟ ಸುತ್ತುತ್ತಾ ಅದೆ ಹಾಳು ಕೊಂಪೆಯಲ್ಲೆ ಸಂಸಾರವೂ ಕಟ್ಟಿಕೊಂಡು ಒಕ್ಕಲು ಮಾಡಲೂ ಬಹುದಿತ್ತು.ಆದರೆ ಅವಳಿಗೆ ಇರುವದು ಒಂದೆ ಒಂದು ಅದಮ್ಯ ಚೇತನವೆಂದರೆ ನಾನು ಒಂದಿಷ್ಟು ಏನಾದರೂ ಕಲಿತು ,ಸಮೂದಾಯದ ಮುಖ್ಯವಾಹಿನಿಯಲ್ಲಿ ಬದುಕು ಕಟ್ಟಿಕೊಳ್ಳುವ ಹಂಬಲ ಮತ್ತು .ಎದೆಕಾರಿಕೆ.ಪ್ರಭಲ ಆಕಾಂಕ್ಷೆಯ ಕನಸು.
ಮರೆವ್ವಳಿಗೆ ಮುಖ್ಯವಾಹಿನಿ ಎಂದರೇನು ? ಎಂದು ಪರಿವಿಗೆ ಬಂದಿದ್ದು ಹೊಸ ನಗರಕ್ಕೆ ತನ್ನ ಬದುಕು ತೆರೆದುಕೊಂಡಾಗಲೆ. ಬಸ್ ಹತ್ತಿ ಕೆಲಸವರೆಸಿಕೊಂಡು ನಗರಕ್ಕೆ ಹೋದಾಗ.ಹಳ್ಳಿಯ ಬದುಕು ಬಹಳ ಸೀಮಿತ ಕನಿಷ್ಟ ಬಯಕೆಗಳ ನಡುವೆ ಗರಿಷ್ಟ ತೃಪ್ತಿಪಡೆದ ಪರಮಾನಂದ ಭಾವನೆ.ಈ ನಗರವೋ ಸದಾ ಇಪ್ಪತ್ನಾಲ್ಕು ತಾಸೂ ಸದಾ ಜೀವಂತ. ಹಣದ ದಾಹಕ್ಕೆ ಹೆಣಗಳುರಳುವವು.ಹೆಜ್ಜೆ ಹೆಜ್ಜೆಗೂ ಸದಾ ವಂಚನೆಯ ಸಂಚು.ದೇವರೂ ಇವರಿಗೆ ವ್ಯಾಪಾರಿ ಸರಕು . ಹಣಬಾಕದೆದರೂ ಎಲ್ಲವೂ ಗೌಣ . ಸಾದಾ ತನ್ನ ಸ್ವಾರ್ಥ ಸ್ವಹಿತ ಚಿಂತನೆಯಲ್ಲೇ ದಿನಗಳುರುಳುವವು.
****
ಮರೆವ್ವಳ ಟೇಬಲ್ ಮೇಲೆ ಇದ್ದ ಆ ಪೈಲ್, ಅವಳು ಬೆಳೆದ ಊರಿನ ಸೂತ್ತಲು ಗಣಿಗಾರಿಕೆ ಚಟುವಟಿಕೆ ನಡೆಸಲು ಅನುಮೊದಿಸಿ ಒಪ್ಪಿಗೆ ಸೂಚಿಸುವ ಕಡತವಾಗಿತ್ತು.ಆಪುಟ್ಟ ಗ್ರಾಮದ ಜನಜೀವನವನ್ನು ದುಸ್ತಿತಿಗೆ ತಳ್ಳುವ ವಿವೇಚನಾ ಶುನ್ಯದ ದರ್ಪದ ದಬ್ಬಾಳಿಕೆಯ ಆಡಳಿತದ ಪ್ರತಿರೂಪದಂತೆ ಕಂಡಿತು. ಹಳ್ಳಿ ಬದುಕು ದುಸ್ತರಗೋಳಿಸುವ ಹುನ್ನರ ಇರದಿದ್ದರೂ ಹಣದ ದುರಾಶೆಗಾಗಿ ಇಡಿ ಹಟ್ಟಿ ಪರಿಸರವೆ ಬಲಿನೀಡಲು ಎಲ್ಲ ವರ್ಗದವರೂ ತರಾತುರಿಯಲ್ಲೇ ಮುಂದಾಗಿನಿಂತಿದ್ದರು.ಆ ಕಡತ ಹಟ್ಟಿ ಜನರ ಬದುಕು ಸರ್ವನಾಶ ಮಾಡುವ ಭವಿಷ್ಯವನ್ನು ಸಾರಿ ಹೇಳುವ ಪ್ರತಿನಿಧಿಯಾಗಿತ್ತು.
ಕ್ಷಣ ಮರೆವ್ವ ಅಂತರ್ಗತಳಾಗಿ ...ಈ ಗಣಿಗಾರಿಕೆ ತಡೆಯುವ ಏದೆಗಾರಿಕೆ ನನ್ನಲಿ ಇದೆಯೇ? ನಾನು ಯಾವ ಹೋರಾಟದ ಹಾದಿ ಹಿಡಿಯಲಿ? ಈ ಭ್ರಸ್ಟ ಹಣಬಾಕ ಸಮುದಾಯದಲ್ಲಿ ಯಾರು ಪರಿಸರ ಕಾಳಜಿ ಕಕಲತ್ತು ಉಳ್ಳವರು? ದುಡ್ಡಿದ ಧಣಿಗಳು ಸ್ವಾರ್ಥಕ್ಕಾಗಿ ಒಂದಲ್ಲಾ ಒಂದು ವೇಷದಾಡಂಬರದಲ್ಲೆ ಮುಳಗಿಕೊಂಡವರು .ಯಾರಿಗೆ ಅರುಹಿ ಹೇಳಲಿ ನಾ ಯಾರು ನನ್ನ ಪ್ರಯತ್ನಕ್ಕೆ ದ್ವನಿಗೂಡಿಸುತ್ತಾರೆ ? ಏನು ಮಾಡಲಿ ? ಎಂದು ತನ್ನೊಳಗಿನ ಅಂತರಾತ್ಮಕ್ಕೆ ತಾನೆ ಪ್ರಶ್ನಿಸಿಕೊಂಡಳು. ವಿವೆಚನೆ ಮಾಡಿದಳು...ಮರೆವ್ವಳ ಮನದಲ್ಲಿ ಮೂಡಿದ ದ್ವಂದ್ವದ ಪ್ರಶ್ನೆ ಗಳಿಗೆ ತಾನೆ ತನ್ನೊಳಗೆ ದಿಟ್ಟ ಉತ್ತರ ಹುಡುಕುತ್ತಾ, ಈ ಹೋರಾಟದ ರಂಗಸ್ಥಳಕ್ಕೆ ನಾನೋಬ್ಬಳೇ ದುಮುಖಲೆ? ಏನು ಸಾಧಿಸಿ ತೋರಿಸಲಿ ? ಯಾರು ಏನಾದರೆನು ನಾನು ಮಾತ್ರ ಸುಖವಾಗಿ ಬದುಕುತ್ತಿರುವೆನಲ್ಲ ಇದು ಸಾಕಲ್ಲವೆ? ದೈತ್ಯದೆದುರು ತೃಣವು ಪ್ರತಿಭಟಿಸಿದಂತೆ ನಾ ಮಣ್ಣಲ್ಲಿ ಮಣ್ಣಾಗಿ ಹೋಗಲೇ? ಎಂಬ ಹೊಯ್ದಾಟದ ಮನಸ್ಸು ವಿವೇಚಿಸಿತು.ಒಳಗೊಳಗೆ ವ್ಯವಸ್ಥೆ ಮೇಲೆ ದ್ವೇಷ ಆವೇಶ ,,ಕ್ಷಣ ಅಸಾಯಕತೆ ...
****
ಮರೆವ್ವಳ ಟೇಬಲ್ ಬಳಿ ಕುಳಿತ ರಾಜಕೀಯ ಆಗುಂತಕ ಧುತನು .. ಹಲೋ ಮೆಡಂ ಏನು ಚಿಂತೆ ಮಾಡುತ್ತಿರುವಿರಿ? ಯಾಕೆ ಏನಾದರೂ ನಿರೀಕ್ಷೆಯೇ? ದೊಡ್ಡ ಪೈಲ್ ಎಂದು ದೊಡ್ಡ ಆಸಾ ಭಾವನೆಯ ಲೆಕ್ಕಾಚಾರವೆ? ಸಂಕೋಚ ಮಾಡಕೋಬೇಡಿ ಏನು ಕೇಳಿ. ಮತ್ತೆ ಯಾವೂದೋ ಸಬುಬುಹೇಳಿ ಪೈಲ್ ಹಿಂದೆ ತಳ್ಳಬೇಡಿ.ಇದು ನಮ್ಮ ಸಾಹೇಬರು ಸ್ಪೇಷಲ್ ಆಗಿ ಆರ್ಡರ್ ಮಾಡಿದ್ದು..ಸುಕಾ ಸುಮ್ಮನೆ ರಗಳೆ ಮೈಮೆಲೆ ಯಳಕೊಳಕ್ಕೆ ಹೋಗಬೇಡಿ.ನಿಮಗೆ ಯಾವ ತೊಂದರೆ ಆಗಬಾರುದು.ಅನ್ನೊದೆ ನನ್ನ ಕಾಳಜಿ..ನಿಮ್ಮ ಸ್ತಿತಿ ನೋಡಿ ಅಯೋ ಅಂತ ನಾನೇ ಹೇಳತಿದಿನಿ ..ನೋಡಿ ನಿಮ್ಮ ಎಲ್ಲ ಕೆಲಸ ಕಡಿಮೆ ಆಗಲಿ ಅಂತ ವಿಶೇಷ ಮುತುವರ್ಜಿಯಿಂದ ನಾನೇ ಕುದ್ದು ಕಮಿಷನ್ ಎಜೆಂಟ್ ಬಳಿಹೋಗಿ ಎಲ್ಲ ಅರ್ಜಿ ಭರ್ತಿ ಮಾಡಿನಿ ರಡಿ ಮಾಡಿರುವೆ. ಸಂಬಂದಿಸಿದ ಎಲ್ಲ ಕಾಗದ ಪತ್ರ ಸಿದ್ದಪಡಿಸಿರುವೆ.ಒಂದಸಲಾ ತಾವೂ ಒಂದ್ ಸಲ ಕಣ್ಣಾಡಿಸಿದ್ರ ಸಾಕೂ...ಬೇಗ ಕೆಲಸ ಮಾಡಿಮೂಗಿಸಿ ನನಗೆ ಸಮಯವಿಲ್ಲ ..ಎಂದು ವಟ ವಟಾ ಎಂದು ಒಂದೇ ಉಸಿರಿನಲ್ಲಿ ಒದರಿದನು.
ಮರೆವ್ವಳಿಗೆ ತಕ್ಷಣ ನೆನಪಾಗಿದ್ದು ತಾನು ಕೆಲಸಕ್ಕೆ ಸೇರುವಾಗ ಅಧಿಕಾರಿಗೆ ನೀಡಿದ ಸಂಭಾವನೆ ...ಸಂಭಾವನೆ ನೀಡಿದ ನನಗೆ ಸಂಭಾವನೆ ಪಡೆವ ಕಾಲಾವಕಾಶ ಬಂದಿತಲ್ಲ ಎಂದು ಮುಸು ನಗೆ ಬಿರಿದಳು.ಏನು ಹೇಳಲಿ ಇವನಿಗೆ ? ಏನು ಕೇಳಲಿ ಇವನಿಗೆ ? ಕೆಲಸಕ್ಕಾಗಿ ನನ್ನ ನಾ ಮಾರಿಕೊಂಡೆ ಅದು ಮರಳಿ ಕೊಡು ಎನ್ನಲೆ ಅಂದು ನಾ ಹರಾಜು ಆದೆ.,ಇಂದು ಈ ಕೆಲಸ ಮಾಡಿಕೊಡಲು ನನ್ನ ನೈತಿಕ ಮೌಲ್ಯವೇ ಅಂತರಂಗದಲ್ಲಿ ಹರಾಜು ಹಾಕಿಕೊಳ್ಳಲೆ? ನನ್ನ ಸ್ವಹಿತಾಸಕ್ತಿ ಗಾಗಿ ದೊಡ್ಡ ಬಂಗಲೇ ಕಾರು ಖರಿದಿಗಾಗಿ ಅದೆಷ್ಟೋ ಜನರ ತಲೆಹಿಡಿದು ತಂದ ಹಣವನ್ನು ಈ ಧೂತನಿಂದ ಪಡೆಯಲೆ? ಏನು ಕೇಳಲಿ ಇವನ ಬಳಿ ನಾ ? ಯಾವ ನಿರಿಕ್ಷೆಗಳಿಲ್ಲದೆ ಪೈಲ್ ಗೆ ಸಹಿ ಹಾಕಿದರೆ ನನ್ನ ಕಣ್ಣೆದುರೆ ನನ್ನ ಹಳ್ಳಿಯು ಗಣಿಗಾರಿಕೆಗೆ ಬಲಿಯಾಗುವದು... ಸ್ವಹಿತೆ ಸಮಾಜಹಿತವೆ .. ಯಾವುದು? ಯಾರಿಗಾಗಿ ? ಏನು ಸಂದೇಶ ಸಾರಲು ? ಮನದಲ್ಲಿ ಗೊಂದಲ ತಳಮಳ ಹೊಯ್ದಾಟ.. ಹೀಗೆ ಗೊಂದಲದಲ್ಲೇ ಕೊಂಚ ನಿಟ್ಟುಸಿರು ಬಿಟ್ಟಳು ಮರೆವ್ವ. ಕೊಂಚ ಸಾವರಿಸಿಕೊಂಡು ರಾಜಕೀಯ ಧುತನಿಗೆ ನೀವು ನಾಳೆ ಬನ್ನಿ ,ಎಲ್ಲ ಕೆಲಸ ನಾಳೆ ಆಗುವದು ಹೊರಡಿ ಎಂದು ಹೇಳಿ ಸಂಜೆ ಯಾಗುತ್ತಲೇ ಕಾಂಕ್ರೇಟ್ ಕಾಡಿನಲ್ಲಿದ್ದ ತನ್ನ ಪುಟ್ಟ ಮನೆಗೆ ಬಂದು ಹಾಸಿಗೆ ಮೇಲೆ ವರಗಿಕೊಂಡಳು.
*****
ಮರೆವ್ವ ಮನೆಯಲ್ಲಿ ಎಷ್ಟು ಚಿಂತಿಸಿದರೂ ಹೇಗೆ ವಿಚಾರಿಸಿ ತಾಳೆ ನೋಡಿದರೂ ನನ್ನ ಬಲಿ ಖಚಿತ.ಆದರೂ ಯಾವುದಕ್ಕೆ ನಾ ಬಲಿಯಾಗಲಿ ? ಹಣಕ್ಕೊ ಹೋರಾಟಕ್ಕೊ ? ಎಂಬ ಗೊಂದಲದಲ್ಲೇ ರಾತ್ರಿ ಇಡಿ ನಿದ್ದೆ ಇಲ್ಲದೆ ನರಳಾಡಿದಳು.ಬೆಳಗಿನ ಜಾವ ಒಂದು ದಿಟ್ಟ ನಿರ್ಧಾರಕ್ಕೆ ಬಂದಳು... ಒಂದು ಬಿಳಿ ಹಾಳೆಯಲ್ಲಿ ಸರಸರನೆ ಗಿಚಿದಳು.ಎದ್ದವಳೆ ಸಮಯಕ್ಕೆ ಸರಿಯಾಗಿ ಕಛೇರಿಗೆ ಹೋದಳು. ಮೆಲಧಿಕಾರಿಯ ಮುಂದೆ ತಾನು ಗಿಚಿದ ಹಾಳೆ ಇಟ್ಟು ಮೌನವಾಗಿ ಮನೆಗೆ ಬಂದಳು...
ಮರೆವ್ವ ಅವಸರ ಅವಸರವಾಗಿ ತಾನು ಬೆಳೆದ ಕುಗ್ರಾಮದತ್ತ ಪಯಣ ಬೆಳಸಿದಳು ದಾರಿಯುದ್ದಕ್ಕೂ ಮುಂದೆ ತಾನು ಮಾಡಬಹುದಾದ ಕಾರ್ಯಕ್ರಮದ ಬಗ್ಗೆ ಚಿಂತಿಸಿದಳು.ಬಸ್ ಇಳಿದವಳೇ ಎದ್ದೆನೋ ಬಿದ್ದೇನೋ ಎಂದು ಓಡುತ್ತಾ ಹಳ್ಳಿ ಸೇರಿದಳು.ಅದೇ ಹಟ್ಟಿ ,ಅದೆ ಕುರಿಗಳು ,ಅದೆ ಜೊಪಡಿಗಳು,ಕೃಶಕಾಯದ ವಿಕಲಾಂಗರು,ಕುಪೋಷಣೆಯ ಎಳೆಯ ಕಂದಗಳು,ಹರಕಲು ಬಟ್ಟೆ ಹಾಕಿ ಕುಳಿತ ವಯೋವೃದ್ಧರು , ಕೊಂಚವೂ ಬದಲಾಗದ ಯತಾಸ್ಥಿತಿ ಕಾಯ್ದುಕೊಂಡ ಅದೇ ಹಳ್ಳಿ..
****
ಮರೆವ್ವ ಹಳ್ಳಿಯ ಒಂದಿಷ್ಟು ಯುವಕರ ಮನೆಗೆ ಓಡಿದಳು. ತಾನು ಬಂದ ಉದ್ದೇಶ ಅರುಹಿದಳು.ಮುಂದೆ ಆಗಬಹುದಾದ ಅವಗಡ ದುರಂತಗಳ ಬಗ್ಗೆ ವಿವರಿಸಿದಳು.ಆದರೆ ,ಅವರಾರೂ ಇವಳ ಮಾತಿಗೆ ಸೊಪ್ಪು ಹಾಕಲಿಲ್ಲ,ಕೇಳುವ ಮನಸ್ಥಿತಿ ಯೂ ಅವರಿಗೆ ಇರಲಿಲ್ಲ...ಹೋಗಮ್ಮ ಯಲ್ಲಿದ್ದಯೋ ಏನೋ ಎಲ್ಲಿಂದ ಬಂದೆವ್ವ.. ನಾವು ನಿಸ್ಸಾಯಕರು ಧಣಿಗಳ ವಿರುದ್ದ ನಾವು ಕುಗು ಹಾಕಿ ಉಸಿರು ಉಳಿಸಿಕೊಳ್ಳಲು ಸಾದ್ಯವೆ? ಹೋಗಮ್ಮ ಹೋಗು ಹೊತ್ತಾಯಿತು ಮಲಗುವ.ಬೆಳಿಗ್ಗೆ ಮಾಡೊಕೆ ಬಾಳ ಕ್ಯಾಮ್ಯಾ ಇದೆ .ಎಂದು ಮಲಗಿಕೊಂಡರು. ಮರೆವ್ವ ಬಂದಕಾರ್ಯಕ್ಕೆ ಸುಂಕವಿಲ್ಲ ಎಂದು ನಿರುತ್ಸಾಹ ತಾಳದೇ ವಿಚಲಿತಗೊಳ್ಳದೆ ಮತ್ತಷ್ಟು ಆವೇಷದಿಂದ ಪಕ್ಕದ ಹಳ್ಳಿಯ ಪುಂಡರಗುಂಪಿಗೆ ತಿಳಿಸಿದರೆ ಏನಾದರೂ ಸಹಕಾರ ಸಿಗಬಹುದೆಂಬ ಒಂದು ಜಲಕ್ ಹೊಳೆಯಿತು. ತಡಮಾಡದೆ ಬಿರಬಿರನೇ ನಡೆದಳು. ಮಾರ್ಗ ಮದ್ಯದಲ್ಲೇ ಆ ಪುಂಡರ ಗುಂಪು ಎದುರುಗೊಂಡಿತು.
ಓ..ಹಳೇ ಹುಡಗಿ ಕಣ್ಮಗಾ ..ಏಲ್ಲೋಗಿದ್ದಿ ಕಣಮ್ಮಿ ಇಷ್ಟುದಿನಾ..ಕಣ್ಣಿಗೆ ಕಾಣಲೇ ಇಲ್ಲ..? ಬೋ ಶ್ಯಾನೆ ದಿನವಾತು ನೋಡಿ ನಿನ್ನ..ಅರಸುವ ಬಳ್ಳಿ ಕಾಲ್ಗೆನೆ ತೋಡಗಿದಂಗ ಕಣ್ಮುಂದೆ ಕಂಡಬಿಟ್ಟಿ..ನೋಡು ಮೊದಲಿಗಿಂತ ಬಾಳ ಚಂದಾಗಿ ಸೋಂಪಾಗಿ ಬೆಳದಿದಿ ..ಬಾಳ ಚಂದಾ ಮೈತುಂಬ ಬಟ್ಟೆನೂ ಸುತಗೊಂಡಿದಿ ,ಒಂದು ಕಿತಾ ರುಚಿ ನೋಡುವಾ ...ಬಾರಮ್ಮೀ ಹಟ್ಟಿತಾವ ಹೋಗುವಾ .. ಎಂದು ಕಾಮ ಪ್ರಚೋದಿತ ಮಾತುಗಳಾಡಿದರು ಪುಂಡರು .ಪುಂಡರ ಮಾತಿಗೆ ಅರೆಕ್ಷಣವೂ ವಿಚಲಿತಳಾಗದ ಮರೆವ್ವ ಈ ಹಿಂದೆ ತನಗೆ ಅದಾವ ನೋವು ಇವರು ನೀಡಿಲ್ಲವೆಂದು ಕ್ಷಮಿಸುತ್ತಲೇ ತಾನು ಬಂದ ಕಾರ್ಯದ ಬಗ್ಗೆ ಗೊಗರೆದು ಹೇಳಿದಳು .. ಪುಂಡರು ಅಯೋ ಇಷ್ಟೇನಾ ನೀ ನಮಗಾಗಿ ಏನೇನೋ ತ್ಯಾಗ ಮಾಡಿರುವೆ ? ನಿ ಹೇಳುವ ಈ ಸಣ್ಣ ಕಾರ್ಯಕ್ಕೆ ಕೈ ಜೋಡಿಸಲಾರೆವೆ ನಾವು? ಅದಾವನು ನಮ್ಮ ಸೀಮ್ಯಾಗೆ ಬರತಾನ ನೋಡುವಾ ಇಷ್ಟು ತಾಕತ್ತಿಲ್ಲವಾ ನಮ್ಮಲ್ಲಿ ? ನಾವೆಲ್ಲ ನಿನ್ನ ಜೋತೆಗಾರರು ನೀ ನಮ್ಮವಳು ಎಂದು ದೊಡ್ಡ ದ್ವನಿಯಲ್ಲಿ ಭಾಷೆ ಇತ್ತರು.. ನೀ ಇಲ್ಲೇ ಇರತಿ ತಾನೇ ನಮ್ಮವಳಾಗಿ ಎಂದು ಮೆಲು ದ್ವನಿಯಲ್ಲಿ ಕೇಳುವದು ಮರೆಯಲ್ಲಿಲ್ಲ...
****
ಹಾಗೂ ಹೀಗೂ ದಿನಗಳುರಳಿದವು ...
ಊರಿನಲ್ಲಿ ಸದ್ದು ಗದ್ದಲ ..ದೂರದಲ್ಲಿ ದೊಡ್ಡ ಟ್ರಕ್, ಹಿಟಾಚಿ ಬರುತ್ತಿವೆ.ಮರೆವ್ವ ಮನೆಯಿಂದ ಹೊರಬಂದು ನೋಡಿದಳು.ನೋಡಿ ಈಗಲಾದರೂ ನನ್ನ ಮಾತಿಗೆ ಬೇಲೆ ನೀಡಿ ಬನ್ನಿ ಸಹಕರಿಸಿ ,ಎಂದು ಕೈಮುಗಿದು ಅಂಗಲಾಚಿ ಗೊಗರೆದಳು...ಜನರು ಅಯ್ಯೋ ವಿಧಿಯೇ..ದ್ಯಾವರೇ .. ನಮಗೆಂಥಾ ಕೇಡು ತಂದೇಯೋ ನೀನು ..ನಿನ್ ಮನೆಕಾಯೋಗ ನಿನ್ ಸಂಸಾರ ಸರ್ವನಾಷ ವಾಗಿ ಹೋಗಾ ..ಇಕಿತಾ ಊರಲ್ಲಿ ನಿನ್ನ ಹಬ್ಬ ಮಾಡಲಿಲ್ಲ ಕುರಿ ಬಲಿ ನೀಡಲಿಲ್ಲ ಅಂಥಾ ನೀ ಮುನಿಸಿಕೊಂಡ್ಯಾ ಅಯೋ ಮುನೆಪ್ಪಾ ಶಿವನೇ ? ಎಂದು ಗೋಳಾಡಿ ಗೋಗರೆದರು ನಿಂತಲ್ಲೇ ಬಾಯಿಬಡಿದುಕೊಂಡರೆ ವಿನಹ ಯಾರೂ ಮರೆವ್ವಳ ಮಾತಿಗೆ ಬೆಲೆ ನೀಡಿ ಹೋರಾಟಕ್ಕೆ ಅಣಿಗೋಳ್ಳಲಿಲ್ಲ...
ಮರೆವ್ವ ಓಡುತ್ತಾ ಪಕ್ಕದ ಹಳ್ಳಿ ಪುಂಡರಿಗಾದರೂ ಸುದ್ದಿ ಮುಟ್ಟಿಸಿ ಬೆಂಬಲ ಪಡೆಯುವಾ ಎಂದು ಒಂದೇ ಉಸಿರಲಿ ಓಡುತ್ತಿದ್ದಳು..ಎದುರಿಗೆ ದೊಡ್ಡ ಧೂಳಿನ ಮದ್ಯ ಕಾರೊಂದು ಕಂಡಿತು ..ಮರೆವ್ವಳ ಓಟಕ್ಕೆ ಬ್ರೆಕ್ ಬಿತ್ತು..ಕಾರ್ ನಿಂತಿತು. ಮರೆವ್ವ ಕೇಲಸ ಮಾಡುತ್ತಿದ್ದ ಆಫೀಸ್ ಗೆ ಬಂದಿದ್ದ ರಾಜಕೀಯ ಧೂತ ನೀಧಾನವಾಗಿ ಕಾರಿನಿಂದ ಕೆಳಗಿಳಿದನು ,ಹೋ ಮೇಡಂ ತಾವಿಲ್ಲಿ? ಕೇಲಸ ಬಿಟ್ಟು ಇಲ್ಲಿಗೆ ಬಂದಿರಾ ? ಇದಕ್ಕೆಲ್ಲ ತಾವೇ ಸೂತ್ರದಾರಿಗಳೋ? ಎಂದು ಕುಹಕವಾಗಿ ನಕ್ಕನು. ಈ ನಗುವಿನ ಹಿಂದೆಯೇ ಮರೆವ್ವಳಿಗೆ ಭಾಷೆ ಇತ್ತ ಪುಂಡರ ದ್ವನಿಯೂ ಹಿಮ್ಮಳಿಸಿ ಗಹಗಹಿಸಿ ನಕ್ಕರು.. ಹೋರಾಟವಂತೆ ಗಣಿಗಾರಿಕೆ ತಡಿಬೆಕಂತೆ ...ಉಳ್ಳವರ ಎದುರು ಉಳಿದವರು ಊಂಟೇ ಈ ಜಗದಲಿ ? ಹಹ್ಹ ಹಹ್ಹ .ಎಂದು ಕೂಗಿದರು.
ಮರೆವ್ವ ಸ್ಥಬ್ದತೆಯಿಂದ ಮೂಕವಿಸ್ಮಿತಳಾಗಿ ಗರಬಡೆದಂತಾದಳು. ಕ್ಷಣ ನಿಂತಲ್ಲೇ ನಿಂತು...ಕಣ್ಣು ಮಿಟುಕಿಸಲಿಲ್ಲ.
ನಾನೋಬ್ಬಳೇ ಇವರೊಟ್ಟಿಗೆ ಹೋರಾಡಿ ,ಆಹುತಿಯಾಗಿ ,ನಾಳೆಯ ದಿನ ಪತ್ರಿಕೆಯಲ್ಲಿ ಅಂತೆ ಕಂತೆಯ ತಿರುಚಿತ ವಿಚಾರ ಬರಹದೊಂದಿಗೆ ಪ್ರಕಟವಾಗುವದು,ನಾನೇ ಅಪರಾಧಿಯ ಸ್ಥಾನದಲ್ಲಿ ನಿಲ್ಲುವದು,ಯಾವುದೋ ಮೂಲೆಯಲ್ಲಿ ಮಲಗಿದ್ದ ಕಾನುನಿನ ಅಡಿಯಲ್ಲಿ ನನ್ನ ಬಂಧಿಸುವದು ವಿಚಾರಣಾಧಿನ ಕೈದಿಯಾಗಿ ಜೈಲಲ್ಲಿ ಕೊಳೆಯುವದು ,ಕೊನೆಗೆ ಲೋಕದ ತಲೆಯಿಂದ ಈ ವಿಚಾರ ಕಣ್ಮರೆಯಾದಾಗ ಸೂಕ್ತ ಸಾಕ್ಷಾಧಾರಗಳಿಲ್ಲದೆ ಕೇಸ್ ಕತಮ್ ಆಗುವದು...ಇದೆಲ್ಲವೂ ಅರಿಯದಷ್ಟು ಮುಗ್ದೆ ಮರೆವ್ವ ಆಗಿರಲಿಲ್ಲ.ಹೀಗಾಗೂವದು ಮರೆವ್ವಳಿಗೆ ಇಷ್ಟವೂ ಇರಲ್ಲಿಲ್ಲ. ಭಲಾಡ್ಯರ ಮುಂದೆ ವೀರಾವೇಶದ ಪೌರುಷ ತೋರಿಸಿ ಹೋರಾಡಿ ವಿರಾಗ್ರಣಿಯಾಗಿ ವೀರ ಮರಣವೂ ಅಪ್ಪುವ ಹುಂಬುತನವೂ ಮಾಡಲಿಲ್ಲ.ಸಾಗರದ ದೈತ್ಯ ಅಲೆಗಳಂತಿರುವ ಭ್ರಷ್ಟವ್ಯವಸ್ಥೆಯ ಎದುರು ಈಜುವ ಹುಂಬುತನ ಮಾಡದೆ ಸ್ಥಂಬಿಭೂತಳಾಗಿ ನಿಂತಳು.. ,ಸದಾ ಸ್ವಾರ್ಥ ದಾಹಕ್ಕೆ ಹೊಂಚು ಹಾಕಿ ಹವಣಿಸುವ ನರ ರಾಕ್ಷಸ ಮನಸ್ಸುಗಳ ಮದ್ಯ ಮರೆವ್ವಳ ಪುಟ್ಟ ಆಶಾಭಾವದ ಮನಸ್ಸು ಎದೆಯೋಡ್ಡಿ ನಿಲ್ಲದೆ ಸ್ಥಬ್ದವಾಯಿತು...
*****
ಅದೊಂದು ದಿನ...
ಬೆಟ್ಟದ ತುದಿಯ ದೊಡ್ಡ ಕಲ್ಲಿನ ಮೇಲೆ ತನ್ನ ಕಥೆಯನ್ನು ಕೆತ್ತಿ ಜೀವನ ಯಾತ್ರೆ ಮುಗಿಸಿದಳು.ಯಾವ ಸದ್ದು ಗದ್ದಲವಿಲ್ಲದೆ ಪ್ರಪಂಚಕ್ಕೆ ಯಾವ ಸಂದೇಶವೂ ನೀಡದೆ ಮರೆಯಾಗಿಹೋದಳು ಮರೆವ್ವ . ಕಲ್ಲಿನ ಮೇಲೆ ಕೆತ್ತಿದ ಬರಹ ಮಾತ್ರ ತನ್ನ ಬಳಿ ಬಂದ ಕುರಿಗಾರರಿಗೆ ಮೌನವಾಗಿ ಕತೆ ಹೇಳುತ್ತಿತ್ತು . ಆದರೆ ಅದರ ಅರ್ಥ ಮಾತ್ರ ಆ ಹಳ್ಳಿಯಲ್ಲಿ ಬದುಕಿದ್ದ ಸಮುದಾಯಕ್ಕೆ ಅರಿವಾಗಲೇ ಇಲ್ಲ...
ವರ್ತಮಾನಕಾಲದಲ್ಲಿ ..ಕುರಿಕಾಯೋ ಹುಡುಗರಿಗೆ ಜಾರು ಬಂಡೆ ಆಟದ ಕಲ್ಲಾಯಿತು
ಭವಿಷ್ಯದಲ್ಲಿ...ಸುತ್ತು ಹತ್ತಳ್ಳಿ ಜನಕೆ ವರ್ಷಕ್ಕೊಮ್ಮೆ ಕುರಿ ಬಲಿ ನೀಡುವ ಮಹಾ ಸಾದ್ವಿ ಮರೆವ್ವಳ ಕಲ್ಲು ಎಂದು ಖ್ಯಾತಿ ಪಡೆದಿತ್ತು.
*ಗತಿಸಿ ಹೋದ ಈ ಘಟನೆ ಇತಿಹಾಸ ಸಂಶೋಧಕನಿಗೆ ಒಂದು ಸಂಶೋಧನಾ ಆಕರವಾಗಿ ಕಲ್ಲು ಕಂಗೋಳಿಸಿತು.
*ವರ್ಣನಾತ್ಮಕವಾಗಿ ಕಾವ್ಯಮಯವಾಕಿ ಬರೆವ ಕವಿ ,ಲೇಖಕನ ಲೇಖನಿಗೆ ಮನ ಒಪ್ಪುವ ವಿಷಯ ವಸ್ತುವಾಯಿತು.
********"
ಕಾಮೆಂಟ್‌ಗಳು