ಬರಹಗಳು
ಸ್ವಾರ್ಥ ಸ್ವಹಿತ ಚಿಂತನೆಗಾಗಿಯೇ ಪ್ರತಿ ಕ್ಷಣವೂ ಜೀವ ತೇಯ್ದು ಸ್ವಹಿತಾಸಕ್ತಿಯಿಂದಲೇ ಬದುಕುವದು ಮಾನವ ಸಹಜ ಹುಟ್ಟು ಗುಣ.
ಸಮಾಜ ಸೇವೆಯ ನೆಪದಲ್ಲಿ ಸಮಾಜವನ್ನೆ ಕೊಳ್ಳೆಹೊಡೆದು ಒಳ್ಳೆಯವನೆಂದು ಪೂಜು ಕೊಡುತ್ತಾ ತನ್ನದೇಯಾದ ಸಾಕು ಹೊಗಳುಭಟ ಸಮೂಹ ಸೃಷ್ಟಿಮಾಡಿಕೊಂಡು ಹೊಗಳಿಕೆಯ ಹಂದರದಲ್ಲೇ ಕಾಲಕಳೆವ ಮನೋಭಾವದವರೇ ಎಲ್ಲಕಾಲದಲ್ಲೂ ಕಾಣುವೆವು.
ಪ್ರತಿ ಕ್ಷಣವೂ ,ಮೋಸ ,ವಂಚನೆ ಸ್ವಾರ್ಥ ,ಐಶ್ವರ್ಯ ,ಅಂತಸ್ತು ಹೆಸರು ಅಧಿಕಾರ ದರ್ಪ ದೌಲತ್ತು ದುರಹಂಕಾರ ದಿಮಾಕು ಸೊಕ್ಕು ಸಿಟ್ಟು ಸೇಡು ಕ್ರೋದ ಮೋಹ ಮದ ಮತ್ಸರ ..ಇವುಗಳ ನಡುವೆಯೇ ನಮ್ಮ ಮನಸ್ಸು ಗಿರಕಿಹಾಕುವದು ಇದನ್ನೆರ ಹಂಬಲಿಸುವದು..ಇವು ಮನೋಸಹಜ ದೌರ್ಭಲ್ಯಗಳು ಹೌದು.ಇವುಗಳನ್ನು ಕುಟ್ಟಿ ಮೆಟ್ಟಿ ಮೀರಿ ನಿಲ್ಲುವ ಶಕ್ತಿ ಸಾಮರ್ಥ ಸ್ಥಿತಪ್ರಜ್ಞೆಯ ಅಸಮಾನ್ಯರಿಗೆ ಮಾತ್ರ.
ಸಾಮಾನ್ಯನು ಸದಾ ನಾನು, ನನ್ನದು, ನನ್ನವರು ನನಗಾಗಿ ನನ್ನ ಸಂತಾನಕ್ಕಾಗಿ ಎಂದು ಸದಾ ಹಪಹಪಿಸಿ ಅದರಲ್ಲೇ ಜೀವನ್ಮರಣದ ಯಾತ್ರೆ ಮುಗಿಸುತ್ತಾನೆ. ತನ್ನ ಜ್ಞಾನ ,ಶಕ್ತಿ ,ಸಾಮರ್ಥ,ಬುದ್ದಿ ಎಲ್ಲವೂ ತನ್ನ ಏಳಿಗೆಗಾಗಿಯೇ ಮೀಸಲಿಡುವನು. ಇದರಾಚೆಯ ಬದುಕಿನ ಚಿಂತನೆ ಮಾಡುವದು ಅಪರೂಪ.. ವಿರಳಾತಿ ವಿರಳ.
ತನ್ನ ಸ್ವಾರ್ಥ ,ಸ್ವಹಿತಾಸಕ್ತಿಯ ಬದುಕು ಸಾಗಿಸಲು ನಾನಾ ಆಡಂಬರದ ಢಂಬ ವೇಶ ಪೋಷಾಕು ಧರಿಸಿಕೊಂಡು.. ಬಯಕೆ ಬೇಡಿಕೆ ಹರಕೆ ಭಕ್ತಿ ವ್ರತ ಜಪ ತಪ ಗಳೆಂದು .. ತನ್ನ ಇಷ್ಟಾರ್ಥ ಸಿದ್ದಿಗಾಗಿ ದೇವರು ದರ್ಮ ವೂ ಬಿಡದೇ ತನ್ನ ಸುಖ ಸಂತೋಷದಲ್ಲೇ ಕಾಲ ಹರಣ ಮಾಡುವದು ಸೃಷ್ಟಿ ಸಹಜ ಗುಣ.. ನಿತ್ಯದ ಬೆಳಕು ಕಾಣುವದು ಇಂತ ಜನರ ಮದ್ಯದಲ್ಲೆ .ಅನಿವಾರ್ಯವೋ ಅಗತ್ಯವೋ ಬದುಕು ಕಟ್ಟಿಕೊಳ್ಳಲೇಬೆಕು ..ಇದರಾಚೆ ನಿಂತು ಚಿಂತಿಸಿ ಸ್ವಯಂ ಇಷ್ಟಾರ್ಥದ ನಿಸ್ವಾರ್ಥದ ಮನ ಸಂಕಲ್ಪದಂತೆ ಬದುಕು ಸಾಗಿಸಲು ಪ್ರಯತ್ನಿಸುವುದು ದುರ್ಲಭ..ದುಸ್ಸಾಹಸ ಸಾಮಾನ್ಯನೇನಾದರೂ ಇದರಾಚೆ ಬದುಕುವೆನೆಂದು ಹೊರಟರೆ ಬದಿಕಿನ ಪ್ರತಿ ಹೆಚ್ಚೆಗೆ ಸಂಕಟ ಎದುರಿಸಬೇಕು.
ಕಷ್ಟ ,ಸುಖ ,ದು:ಖ ಸಮತೋಷ, ಸಾವು ,ನೋವು ಎಲ್ಲವೂ ಒಂದೇ ಎಂದು ಭಾವಿಸಿ, ಬದುಕಿನ ರಾಗಾದಿದ್ವೇಶಗಳಿಗೆ ಬಗ್ಗದೆ ಜಗ್ಗದೆ ಕುಗ್ಗೆ ಹಿಗ್ಗದೆ ಮುನ್ನಡೆಯುವ ಮನಸ್ಸುಳ್ಳವರು, ಕೇಲವೇ ಕೆಲವು ಸ್ಥಿತಪ್ರಜ್ಞರು ಮಾತ್ರ.. ಈ ಸ್ಥಿತಪ್ರಜ್ಞ ಮನೋಭಾವದವರು ಕೋಟಿಗೊಬ್ಬರು ..ಇವರು ಮಾನವ ಸಹಜ ಬದುಕಿನ ಬಗ್ಗೆ ಹೆಚ್ಚು ಚಿಂತಿಸಲಾರರು .ಅವರ ಇಚ್ಛೆ ಆಸಕ್ತಿ ಮಹತ್ವಾಕಾಂಕ್ಷೆ ಎಲ್ಲವೂ ಅಸಮಾನ್ಯವಾದದ್ದು .. ಸಾಮಾನ್ಯರಲ್ಲಿದ್ದೆ ಅಸಮಾನ್ಯಬದುಕು ಕಟ್ಟಿಕೊಂಡವರು ...
ಇಂತ ಮಹಾನ್ ಸಮುದಾಯ ಹಿತಚಿಂತಕರು ಯಾವುದನ್ನು ತನಗಾಗಿ ಚಿಂತಿಸಲಾರರು ..ತನಗಾಗಿ ಅಪೇಕ್ಷಿಸಲಾರರು .. ಇಂತವರೇ ಯುಗಪುರುಷರು ..ಕೋಟಿಗೊಬ್ಬರು..ಸ್ಥಿತಪ್ರಜ್ಞರು ಸನ್ಯಾಸಿಗಳು ಬಳಸಿ ಬ್ರಹ್ಮಚಾರಿಗಳು ನಿಜವಾದ ನಡೆದಾಡುವ ದೇವರು.ಪ್ರಾಥಸ್ಮರಣಿಯರು..ಕ
..ಪ್ರಜಾಪ್ರಭುತ್ವ ಉಳ್ಳವರ ಒಂದು ಭದ್ರಕೋಟೆ..
ಸ್ವತಂತ್ರಾನಂತರದ ಭಾರತವು ದೀಘವಾಗಿ ಹಾದಿ ಸವೆಸಿ ಬಂದಿದೆ. ಯವ್ವನಾವಸ್ಥೆಯಿಂದ ವೃದ್ದಾಪ್ಯದ ಹಾದಿ ಹಿಡಿದಿದೆ.
ಯವ್ವನದಲ್ಲಿದ್ದ ಹುರುಪು ,ಹುಮ್ಮಸ್ಸು ,ತುಕ್ಕುಹಿಡಿದು ಹೊಳಪುಕಳೆದುಕೊಂಡಿದೆ...ತನ್ನ ಹಳಸಲು ಗುರಿ ಉದ್ದೇಶಗಳನ್ನೆ ಹೊಸ ಚಕ್ರಾದಿಪತಿಗಳಿಗೆ ನೀಡಿ ಬಿಕರಿಮಾಡುತ್ತಿದೆ.ಆದರೆ ,ಕೊಳ್ಳುವವರು ಮಾತ್ರ ಯಾರೂ ಇಲ್ಲ.ಸ್ವತಂತ್ರ ಹೋರಾಟದ ಜನನಾಯರ ಪೊಷಾಕು ಹಾಕಿಕೊಂಡು ಅವರ ತತ್ವಾದರ್ಶಗಳ ಗೋರಿ ಮೇಲೆ ಮಜಲಿನ ಮಹಲು ಕಟ್ಟಿ ಹೊಂಚುಹಾಕಿ ಸಂಚುರುಪಿಸುವರು ಎಲ್ಲೆಂದರಲ್ಲಿ ತನ್ನ ತಾನೇ ಮಾರಾಟಕ್ಕೆ ನಿಂತಿರುವರು.
ಎಪ್ಪತ್ತು ವರ್ಷಗಳ ಹಿಂದಿನ ನಿಸ್ವಾರ್ಥದ ಹೋರಾಟವು, ಕ್ಷಣ ಕಾವಲಿ ಮೇಲಿನ ದೋಷೆ ತಿರುವಿದಂತೆ ಎಲ್ಲವೂ ಬದಲಾಗಿಹೊಯಿತು.. ಉಳ್ಳವರು ಇಲ್ಲವಾಗಿ ಹೋದರು. ಅಷ್ಟೊ ಇಷ್ಟೊ ಸಾಮಾಜಿಕ ಬದ್ದತೆ ಕಳಕಳಿಯುಳ್ಳವರು ಕಳೆದುಹೋದರು.ತ್ಯಾಗ ಬಲಿದಾನದ ಅಮರ ಜೀವಿಗಳಾದರು.ಹಂಬಲಿಸಿ ಕೆಲವರು ರಾಜಕಾರಣಿಯ ಹೊಸ ದಿಕ್ಷೆ ಪಡಡೆದರು .ಕಾಲಗತಿಸಿದಂತೆ ಕೆಲವರ ತಲೆ ಮತ್ತು ತೋಳುಗಳು ಬಲಿತವು .ಬದುಕಿನ ದಿಕ್ಕು ದಸೆ ನಿದಾನವಾಗಿ ಬದಲಾಯಿತು. ಮದುವೆ ಮಕ್ಕಳು ಸಂಸಾಹ ವ್ಯಾಮೋಹ ಹೆಚ್ಚಾಗಿ,ಹಿಂದೆ ನಡೆದು ಬಂದ ಹಾದಿ ಮಸುಕು ಮಬ್ಬಾಗಿ ಕಾಣುವಂತಾಯಿತು. ಬಹುಷ್ಯ ವೃದ್ದಾಪ್ಯದಿ ಕಣ್ಣು ಮಂಜಾಯಿತು.! ಮಕ್ಕಳು ನೋಡು ನೋಡುತ್ತಿದ್ದಂತೆ ಬೆಳೆದರು ಮಕ್ಕಳು ಬೇಳೆದಂತೆ ಸಂಪತ್ತು ಸಮೃದ್ದವಾಯಿತು. ವಂಶದ ಕುಡಿಗೆ ಅಧಿಕಾರ ಹಸ್ತಾಂತರ ಮಾಡಲು ರಾಜತಾಂತ್ರಿಕ ತಂತ್ರ ಕುತಂತ್ರ ಒಳಸುಳಿ ಹಾದಿ ಬಳಸಿದರು.ಗಾಡ್ ಪಾದರ್, ಬ್ಯಾಕ್ ಬೊನ್ ಗಳಾಗಿ ತಾವೇ ನಿಂತರು .ಪ್ರಪಂಚದ ಸುಖ ಭೋಗ ಲಾಲಸ್ಯಗಳು ಮನೆಯಂಗಳಲ್ಲಿ ಮುದುಡಿ ಕುಳಿಸಿದರು. ಈ ಹೊಸ ತಲೆಮಾರಿನವರು ಬೆಳದಿಂಗಳ ಬೆಳಕಿಗೂ ಕೊಡೆಹಿಡಿಯುಲು ಹಂಬಲಿಸಿದರು..
ಕಾಲಕ್ರಮೇಣ ಇದೆಲ್ಲವೂ ಕಾರ್ಯಾಂಗದ ಕಣ್ಣಿಗೂ ಬಿದ್ದಿತು (ಅಧಿಕಾರಿಗಳು)ಇವರೂ ಮತಿಹೀನರಂತೆ ವರ್ತಿಸತೊಡಗಿ ದಾಗ ಆಡಳಿತ ಯಂತ್ರ ಎಲ್ಲಿ ಕಳೆದು ಹೋಗುವದೆಂಬ ಭಯದಿಂದ ಕಾಯ್ದೆಗಳ ಗುರಾಣಿ ಹಿಡಿದರು .ಆದಾಗ್ಯೂ ಅದಿಕಾರಿ ವರ್ಗ ವು ಶಾಸನ ರೂಪಿಸುವಂತವರಿಗೂ ಸೊಡ್ಡುಹೊಡೆದು ನಿಂತರು.ಆಗ ಅನಿವಾರ್ಯವಾಗಿ ತಮ್ಮ ಜಾತಿಯವರು ಎಂದುಕೊಂಡು ಕುಧರ್ಮ ದಿಕ್ಷೆ ನೀಡಿದರು.
ರಾಜಕಾರಣಿಗಳು ಮಕ್ಕಳನ್ನು ತಮ್ಮ ಉತ್ತರಾಧಿಕಾರಿಗಳಾಗಿ ಮಾಡಿ ಚಿಕ್ಕ ಚಿಕ್ಕ ರಾಜ್ಯಗಳು ಸ್ಥಾಪಿಸಿ.ಕಾವಲಿಗಾಗಿ ಕಾನುನಿನ ಕೋಟೆಯೂ ಕಟ್ಟಿದರು.ಕಾಲಕ್ರಮೇಣ ಯಾರೂ ನುಸುಳದಂತೆ ತಮ್ಮದೇ ಸ್ವಂತ ಸೈನ್ಯ ಕಟ್ಟಿದರು .(ಬಂದು ಬಳಗ) ನಾವೆಲ್ಲ ಒಂದೇ ಕುಲದವರು ಎಂದು ಒಬ್ಬರಿಗೊಬ್ಬರು ಕೈಕುಲಕಿಕೊಂಡರು. (ರಾಜಕಾರಣಿ &ಅಧಿಕಾರಿವರ್ಗ)ಹೊಸಬರಾರೂ ಕೊಟೆಯೊಳಗೆ ನುಸುಳದಂತೆ ಕಲ್ಲು ಕಲ್ಲಿಗೂ ಕ್ಯಾಮರಾ ಫಿಕ್ಸ ಮಾಡಿದರು.(ಬ್ರೊಕರ್ ಗುಪ್ತಚರರು).ಹಾಗೋ ಹೀಗೊ ತಮ್ಮ ಜ್ಞಾನ ಬುದ್ದಿಶಕ್ತಿಯಿಂದ (cet ಸ್ಪರ್ಧಾ ಪರೀಕ್ಷೆ ) ಒಳನುಸುಳಿದರೂ ಒಂದಿಷ್ಟು ದಿನ ಕರ್ಥವ್ಯದ ಉಪದೇಶದ ಮಂತ್ರ ದಿಕ್ಷೆ ನೀಡಿ ಜಪಿಸಲು ಹೇಳಿದರು..ದಿನಗಳೆದಂತೆ ಇವರೆ ಕೊಟೆಯ ಕಾವಲುಗಾರರಾಗಿ ನೇಮಕವಾದರು..(ಭ್ರಸ್ಟ ವ್ಯವಸ್ಥೆಯ ಪಾಲಕರು) ತಮ್ಮ ವಂಶದ ತಲೆ ತಲೆ ಮಾರುಗಳು ತುಕಡಿಸುತ್ತಾ ಕುಳಿತು ತಿಂದರೂ,ಕರಗದ ಅಕ್ಷಯ ನಿಧಿಯ ಒಡೆಯರಾಗಿಹೊದರು.ತಮ್ಮ ಶಕ್ತಾನುಸಾರ (mp,mla,,ias,kas ಬಂಡವಾಳಗಾರರು)ಸಾಮ್ರಾಜ್ಯದ ಚಕ್ರಾದಿಪತಿಗಳಾಗಿ ಇಂದ್ರಲೋಕದ ಸ್ವರ್ಗ ಧರೆಗಿಳಿಸಿ ಸುಕದ ಸುಪ್ಪತ್ತಿಗೆಯಲ್ಲಿ ತೆಲಾಡುತ್ತಿರುವರು.ಜನಸಾಮಾನ್ಯರು ಇವರು ಹಾಕುವ ಬಿಕ್ಷೆಗೆ ಕೈಯೊಡ್ಡಿ ನಿಲ್ಲಬೇಕು..ದಣಿಗಳು ಸದರ್ಬ ಸುಧಿನ ಮೂರ್ಹತ(ಚುನಾವಣೆ)ನೋಡಿ ದಾನ ಮಾಡುವರು..ಇದುವೆ ಪಾಲಿಗೆ ಬಂದ ಪಂಚಾಮೃತ ಭೂಲೋಕದ ದೇವರು ಕರುಣಿಸಿದ ಮಹಾ ವರಪ್ರಸಾದ ಎಂದು ಕಣ್ಣಿಗೆ ವೃತ್ತಿ ಸ್ವಿಕರಿಸಬೇಕು.(ಸೌಲಭಗಳು) ಅನ್ಯಾಯ ಮೋಸ ವಂಚನೆ ಎಂದು ಹೋರಾಟ ಹರತಾಳ ಮಾಡಿದರೆ ಕಾನುನಿನ ಕುಣಿಕೆ ಬಿಗಿದು ಮಕಾಡನೆ ಮಲಗಿಸಿಬಿಡುವರು. ಪಿತ್ತ ನೆತ್ತಿಗೆರಿದರೆ ಸುಪಾರಿ ನೀಡಿ ಸಾಯಿಸಿ ,ಗೊರಿ ಕಟ್ಟಿಸಿ ಹೂಗುಚ್ಚದ ಸಮೇತ ಸಾಂತ್ವಾನದ ಅಶೃತರ್ಪಣ ಬಿಡುವರು.
ಬಯೋಮೆಟ್ರಿಕ್ ಬಾಯ್ ಬಾಯ್ ..
ಸರ್ಕಾರದ ಎಲ್ಲ ಇಲಾಖೆಗಳಲ್ಲಿಯೇ ಬಹುದೊ(ದ)ಡ್ಡ ಇಲಾಖೆ ಪ್ರಾಥಮಿಕ ಮತ್ತು ಪೌಢ ಶಿಕ್ಷಣ ಇಲಾಖೆ ಎಂದು ವಿವರಿಸಿ ಹೇಳಬೆಕಿಲ್ಲ.ಇದು ಅತ್ಯಂತ ಕುಗ್ರಾಮದಿಂದ ಹಿಡಿದು ಹೈಟೆಕ್ ಮೆಟ್ರೊ ಸಿಟಿ ವರೆಗೂ ತನ್ನ ಭಾಹು ಬಂದಗಳು ಚಾಚಿಕೊಂಡಿದೆ.ಇದರಲ್ಲಿ ಶಾಲೆಗಳು ಮತ್ತು ಆಡಳಿತ (ತರಬೇತಿ,ಸಂಶೋಧನೆ ಸೌಲಭನೀಡುವ rmsaಸರ್ವಶಿಕ್ಷಣ )ಎಂಬ ಪ್ರಧಾನ ವಿಂಗ್ ಗಳಿವೆ.ಆಡಳಿತ ಇಲಾಖೆಗಳು ಸಾಮಾನ್ಯವಾಗಿ ನಗರ ಪಟ್ಟಣ ಗಳಿಗೆ ಸೀಮಿತ.ಈ ಆಡಳಿತ ಕಛೇರಿಗಳಿಗೆ ಬಯೋಮೆಟ್ರಿಕ್ ಅಳವಡಿಸಿದರೆ ಸಾವಕಾಶವಾಗಿ ಶಭಾಷ್ ಎನ್ನಬಹುದೇನೋ?
ನಮ್ಮೂರ ಕನ್ನಡ ಕಿರಿಯ ಪ್ರಾಥಮಿಕ ಶಾಲೆ ಎಂದು ದೂರದಿಂದಲೇ ದಪ್ಪಕ್ಷರದಿ ದೊಡ್ಡದಾಗಿ ಕಾಣುವ ಮುರುಕಲು ಶಾಲೆಗೆ ಮೂಗಿಗಿಂತ ಮೂಗುತೀಯೇ ಭಾರವಾಗಿ ಗೊಚರಿಸುವ ನಿಚ್ಚಳವೇ ಹೆಚ್ಚು, ಈ ಬಯೋ ಮೆಟ್ರಿಕ್.
ಸೂರ್ಯ ಉದಯದೊಂದಿಗೆ ಬೆಳಿಗ್ಗೆ ನಾಪತ್ತೆಯಾದ ಕರೆಂಟು, ಮತ್ತೆ ಕಂಗೊಳಿಸುವದು ಸೂರ್ಯ ಕಣ್ಮರೆಯಾದಾಗಲೇ.ಹೀಗಿರುವಾಗ ಬಯೋಮೆಟ್ರಿಕ್ ಟೂಯ್ ..s ಟಕ್ ...sಎನ್ನಲು ಅದಕ್ಕೆ ಬಾಡುಟ ಹೇಗೆ ಹಾಕೊದು? (ಕರೇಂಟ್)ಚಾರ್ಜ ಇಲ್ಲ ಎಂದರೆ ,ಬ್ಯಾಟರಿ ಬ್ಯಾನಿ ಕೊಡಬಹುದು .ಅದನ್ನ ಸಾಕೊಕೆ ಸಾವು ಬದುಕಿನ ಹೆಣಗಾಟವೇ ಮಾಡಬೇಕು. ಇನ್ನು ಇತ್ತ ,ಸಾಲಿ ಇದ್ದರ ಮಾಸ್ತರಿಲ್ಲ .ಮಾಸ್ತರಿದ್ರ ಮಕ್ಕಳಿಲ್ಲ.ಮಕ್ಕಳು ಮಾಸ್ತರ ಇದ್ದರೆ ಸಾಲಿನೇ ಸೋರತಾದ .ಒಂದಿದ್ದರ ಮತ್ತೊಂದಿಲ್ಲ ಅನ್ನುವ ನಮ್ಮ ಕುಗ್ರಾಮದಾಗ ಬಯೊಮೆಟ್ರಿಕ್ ಹಿಡಿ ಶಾಪ ಹಾಕಿ ,ಯಲ್ಲಾರನ್ನ ಬೈಕೊತ ಕೂರೊದು ಗ್ಯಾರಂಟಿ.
ಸ್ಮಾರ್ಟ್ ಪೊನ್ ಸ್ಟಾರ್ಟೂ ಮಾಡೊಕೂ ಬಾರದ ಬಾಳಮಂದಿ ಶಿಕ್ಷಕರು ಸಾಲಿಯೋಳಗ ಸಾವು ಬದುಕಿನೊಂದಿಕೆ ಶಣಸಾಟ ಮಾಡತಿದಾರ (ತಂತ್ರಜ್ಞಾನದ ಅರಿವಿಲ್ಲದೆ)ಇಂಥ ಅತಂತ್ರ ಪರತಂತ್ರದ ವ್ಯಾಳ್ಯಾಗ ನಿನ್ನ ಹೆಬ್ಬಟ್ಟ ಬಯೋಮೆಟ್ರಿಕ್ ಗೆ ಒತ್ತು ಅಂದ್ರ ,ಸೂತಾರಾಮ್ ಒಪ್ಪಕ್ಕಿಲ್ಲ .ನಾನು ಹೆಬ್ಬಟ್ ಮನಷ್ಯಾ ಅಲ್ಲ .ನನಗೂ ಸೈ ಮಾಡಕ ಬರತಾದ ಅಂತ ತೊಂಟನ್ಯಾಯಾ ತಗಿತಾರ.. ಬಾಳ ಜುಲುಮಿ (ಒತ್ತಾಯ)ಮಾಡಿದರು ಸಿಟ್ಟು ಸೆಡುವಿನಿಂದ ದಿಟ್ಟಿಸಿ ಹೇಳತಾರ ,'ನಮಗ ಇದರ ಗಂದ ಗಾಳಿ ಏನೂ ಗೊತ್ತಿಲ್ಲ.'ಒಂದೆರಡು ಬಾರಿ ನಮಗೆ ಟ್ರೆನಿಂಗ್ ಕೊಡಿ ಅಂತ ಹರತಾಳ ಕುರತಾರ.ಇದು ಗ್ಯಾರಂಟಿ.
ಸಾಲಿ ಎಂಬ ಸಂಸಾರಕ್ಕ ಸಮಯಕ್ಕೆ ಸರಿಯಾಗಿ ಹಾಲು ಊಟ ,ಬಟ್ಟಿ ,ನೀಡಿ ಸಾಕೊದೆ ಬಾಳ ಹೈರಾಣಾದ ಕೇಲಸ.ಇದನ್ನ ನೀಗಿಸಬೇಕಾದರ ದಿನಾನು ಕುರಿ ಕ್ವಾಣ ಬಿಳತಾವ. ಕೆವವೊಂದು ಸಾರಿ ಕೆಲಸ ಕೆಟ್ಟಾಗ ಒಲಿಗಿ ಹಚ್ಚೊಕ ಕಡ್ಡಿ ಡೆಬ್ಬಿ ತರೊಕ ಹರದಾರಿ ನಡಕೊಂಡ ಹೋಗಬೇಕು .ಇಂತದ್ರಾಗ ಬಾಳ ತ್ರಾಸ ಮಾಡಕೊಂಡು ಬೊಯೊಮೆಟ್ರಿಕ್ ನಿಭಾಯಿಸೊದ್ಯಾಂಗ?ಒಂದು ಚುರ್ ಚಿಂತಿ ಮಾಡಲೆ ಬೇಕು.
ದಿನಬೆಳಗಾದ್ರ ಹೊಲ ಮನಿ ಕೆಲಸ ಮಾಡಕೊಂಡು ಅಡುಡಿಲೆ (ಬೇಗ)ಕೊಡತಗೊ ಕೆಲಸ ಸಂಬಾಳಿಸಿಕೊಂಡು ಮಕ್ಕಳ ಕುಂಡಿ ತೊಳದು ಸ್ತಾನ ಮಾಡಿಸಿ,ಸಾಲಿಗಿ ಸೇರಸಿ ,ಇನ್ಕ್ರಿಮೇಂಟ್ ಆಗಿಲ್ಲಂತ ತಲಿ ಕೆರಕೊಂಡು beo ಆಪೀಸಕ ಅಡತಾಕಿ ಕಾಲಾಗಿರೊ ಚಪ್ಪಲ ಸಂಸಗೊಂಡು ಎದ್ದೊ ಬಿದ್ದನೋ ಅಂತ ಓಡಿ, ಸಾಲಿಗೊಗೊ ಬಸ್ ಹತಗೊಂಡು ,ಅಬ್ಬ !ನನ್ ಸೊಂಟ ಉಳಿತು ಅಂತ ಸಾವರಿಸಿಕೊಂಡು, ಬಯೋಮೆಟ್ರಿಕ್ ಅನ್ನು ಭೂತ ಕ್ಷಣ ನೆನಸ್ಕೊಂಡು ಎದ್ನೊ ಬಿದ್ನೊ ಅಂತ ಓಡೋಡಿ ಸಾಲಿ ಮೆಟ್ಲ ಹತ್ತಬೇಕು..ಒತ್ತೊಕೆ ಶಾಲೇ ಬಾಗಲೇ ತಗಿದಿರಲ್ಲ. ಹೆಡ್ಮಾಸ್ತರೇ ಬಂದಿರಲ್ಲ.. ಕಸಗುಡಿಸೊ ದಿಕ್ಕಿಲ್ಲ.ಬಾಗಲ್ ತಗೆಯೊ ಚಪರಾಸಿ ಚಾರ್ಜಮ್ಯಾಲಿಲ್ಲ.. ಎಂತದು ಮಾರಾಯರೆ?
ಹೊಸದಾಗಿ ತಂದ ' ಹೋರಿ'ನ ಬಾಳ ಕಾಳಜಿ ಕಕಲತ್ತಿಂದ ಸಾಕಿ ಸಲುಹಿ ಮುದ್ದಮಾಡತಿವಿ.ಬಾಳದಿನ ಆದಮ್ಯಾಲ ಸಾಕೊಕ ಬ್ಯಾಸರ ಮಾಡಕೊತಿವಿ.ಹಿಳಿದ್ದ ಮಾತ ಕೇಳಿಲ್ಲಂದ್ರ ಹಾದಿಗಿ ತರೊಕ ಮುಗದಾಣಿ ಲಗಾಮು ಹಾಕತಿವಿ.ಪಳಗಸತಿವಿ..ಇದರಂತೆ ಸಾಲಿಗ ಬಂದ ಬಯೋಮೆಟ್ರಿಕ್ ಕತೆಯು ಬ್ಯಾರೆ ಆಗಲ್ಲ.ಆರಂಬದಾಗ ಬಾಳ ಕಾಳಜಿ ಭಯ ಎಚ್ಚರ ದಿಂದ ಜತ್ನ (ಕಾಳಜಿ)ಮಾಡತಿವಿ .ಮಾಸ್ತರ್ ಹೇಳದಂಗ ಕೇಳೊ ರೀತಿ ಕೇಲಸ ಮಾಡೊಕೆ ಎಲ್ಲ ರೀತಿ (ಕು)ತಂತ್ರ ಮಾಟ ಮಂಮಂತ್ರ ಮಾಡಿಸಿ ಬಿಡತಿವಿ .ಒಂದ್ ವ್ಯಾಳೆ ಅದಕ್ಕೆ ಬಗ್ಗಲಿಲ್ಲ ಅಂದ್ರ ರಾಂಗ್ ಕಲೆಕ್ಷನ್ ಅಂತ ಎಳ್ಳು ನೀರು ಬಿಟ್ಟು ನಾಲ್ಕು ಕಣ್ಣಿರ್ ಸುರಸಿ ಸಾಂತ್ವಾನ ಮಾಡಕೊತಿವಿ.ಇನ್ ಇದನ್ನ ರಿಪೇರಿನೋ ,ರಿಪ್ಲೇಸ್ ಮಾಡೊಕೆ ಮೂರ ತಿಂಗಳಾದ್ರು ಗ್ಯಾರಂಟಿ .ಮಾಸ್ತರ್ ಮಸ್ತ ಮಜಾ ನಿರಂತರ ವ್ಯಾಪಕವಾಗಿ ನಡದೇ ಇರತಾದ.
ಕಾಮೆಂಟ್‌ಗಳು